ಪತ್ನಿ ಐಶ್ವರ್ಯಾ ಪೋಸ್ ಗೆ ಫಿದಾ ಆದ ಅಭಿಷೇಕ್ ಬಚ್ಚನ್

ಗುರುವಾರ, 23 ನವೆಂಬರ್ 2017 (08:33 IST)
ಮುಂಬೈ: ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಬಚ್ಚನ್ ಬರ್ತ್ ಡೇ ಪಾರ್ಟಿ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಇದಕ್ಕೆ ಸ್ಟಾರ್ ನಟರು, ಮಕ್ಕಳೆಲ್ಲಾ ಬಂದಿದ್ದರು. ಆದರೆ ಸಮಾರಂಭದ ಫೋಟೋವೊಂದನ್ನು ಅಭಿಷೇಕ್ ಬಚ್ಚನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಭಾರೀ ಗಮನ ಸೆಳೆಯುತ್ತಿದೆ.
 

ಪಾರ್ಟಿಯಲ್ಲಿ ಅಮ್ಮ ಐಶ್ವರ್ಯಾ ಜತೆ ಆರಾಧ್ಯ ಜೈಂಟ್ ವೀಲ್ ನಲ್ಲಿ ಕೂತು ಮಜಾ ಮಾಡುತ್ತಿರುವ ಫೋಟೋವೊಂದನ್ನು ಅಭಿಷೇಕ್ ಪ್ರಕಟಿಸಿದ್ದಾರೆ. ಇದು ಭಾರೀ ವೈರಲ್ ಆಗಿದೆ.

ಫೋಟೋ ಜತೆಗೆ ‘ಅಮ್ಮನಂತೆ ಮಗಳು.. ಸುಂದರವಾಗಿದ್ದಾರೆ’ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಇದಕ್ಕೆ ಸಾವಿರಾರು ಲೈಕ್ಸ್ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ