ಶಿರಡಿ ಸಾಯಿಬಾಬಾಗೆ ಕಿರೀಟವನ್ನು ದಾನ ನೀಡಿದ ನಟಿ ಶಿಲ್ಪಾಶೆಟ್ಟಿ

ಭಾನುವಾರ, 18 ನವೆಂಬರ್ 2018 (15:29 IST)
ಮುಂಬೈ : ಆಗಾಗ ದೇವಸ್ಥಾನ, ಪವಿತ್ರ ಕ್ಷೇತ್ರಗಳಿಗೆ ಭೇಟಿ ನಿಡುತ್ತಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಇದೀಗ ಶಿರಡಿ ಸಾಯಿಬಾಬಾ ಗೆ ಅತ್ಯಂತ ಬೆಲೆಬಾಳುವ ಕಿರೀಟವನ್ನು ಅರ್ಪಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ಸಹೋದರಿ ಶಮೀತಾ ಶೆಟ್ಟಿ ಜೊತೆ ಶಿರಡಿಗೆ ಭೇಟಿ ನೀಡಿದ್ದರು. ಸಾಯಿಬಾಬನ ದರ್ಶನ ಪಡೆದ ನಟಿ ಶಿಲ್ಪಾಶೆಟ್ಟಿ ಶಿರಡಿ ಬಾಬಾಗೆ 800 ಗ್ರಾಂನ ಚಿನ್ನದ ಕಿರೀಟವನ್ನು ದಾನದ ರೂಪದಲ್ಲಿ  ನೀಡಿದ್ದಾರೆ. ಇದರ ಬೆಲೆ 26 ಲಕ್ಷ ರೂಪಾಯಿ ಎಂಬುದಾಗಿ ತಿಳಿದುಬಂದಿದೆ.

 

ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ನಟಿ ಶಿಲ್ಪಾಶೆಟ್ಟಿ ಬಾಬಾರಿಗೆ ನೀಡಿದ ಒಡವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಶಿರಡಿಗೆ ಭೇಟಿ ನೀಡಿದ ಶಿಲ್ಪಾರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ