ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದೇನು?!
‘ರಕ್ಷಣಾ ಇಲಾಖೆಗೆ ನೀಡುವ ಹಣದಲ್ಲಿ ಶೇ.5 ರಷ್ಟು ಕಡಿತ ಮಾಡಿ, ಒಂದು ಬಾಂಬ್ ಕಡಿಮೆ ತಯಾರಿಸಿ, ಅದನ್ನು ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗೆ ನೀಡಿ. ಇದನ್ನು ಉಚಿತವಾಗಿ ಮಹಿಳೆಯರಿಗೆ ವಿತರಿಸಿ, ಆ ಮೂಲಕ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚಿನ ಗಮನಕೊಡಿ’ ಎಂದು ಅಕ್ಷಯ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿಯವರ ಹಲವು ಯೋಜನೆಗಳನ್ನು ಬೆಂಬಲಿಸಿರುವ ಅಕ್ಷಯ್ ಮಾತುಗಳನ್ನು ಕೇಂದ್ರ ಸರ್ಕಾರ ಕೇಳುತ್ತಾ? ಕಾದು ನೋಡಬೇಕು.