ಮಂಡ್ಯ ಜಿಲ್ಲೆಯ ಬಡ ಜನರಿಗೆ ಆಲಿಯಾಭಟ್ ಮಾಡಿದ ಸಹಾಯವಾದರೂ ಏನು ಗೊತ್ತಾ?

ಭಾನುವಾರ, 15 ಜುಲೈ 2018 (09:16 IST)
ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ವಿದ್ಯುತ್ ಒದಗಿಸುವ ಮೂಲಕ ಬಡ ಜನರಿಗೆ ತಮ್ಮ ಸಹಾಯಹಸ್ತ ನೀಡಿದ್ದಾರೆ.


ಹೌದು. ನಟಿ ಆಲಿಯಾ ಭಟ್ ಅವರು ಮಂಡ್ಯದ ಕಿಕ್ಕೇರಿ ಗ್ರಾಮದ 40 ಕುಟುಂಬಗಳಿಗೆ ಸೋಲಾರ್ ಲೈಟ್ ಗಳನ್ನು ಒದಗಿಸುವ ಕೆಲಸಕ್ಕೆ ಸಹಾಯ ಮಾಡಿದ್ದಾರೆ. ಎಆರ್ ಓಎಚ್‍ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಸೋಲಾರ್ ದೀಪವನ್ನು ಒದಗಿಸುವ ಕಾರ್ಯ ಮಾಡುತ್ತಿತ್ತು. ಈ ಸಂಸ್ಥೆಯು ತಾನು ನಡೆಸುವ `ಲಿಟರ್ ದ ಲೈಟರ್' ಕಾರ್ಯಕ್ರಮಕ್ಕೆ ಚಾರಿಟಿಯಾಗುವಂತೆ ಆಲಿಯಾ ಭಟ್ ಅವರಿಗೆ ಆಹ್ವಾನ ನೀಡಿದೆ.


ಇದಕ್ಕೆ ಸಮ್ಮತಿಸಿದ ನಟಿ ಆಲಿಯಾ ಭಟ್ ಅವರು ‘ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್' ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ಅಭಿಯಾನದಲ್ಲಿ ತಮ್ಮ ವಿಶೇಷ ಉಡುಪೊಂದನ್ನು ಮಾರಾಟಕ್ಕೆ ಇಟ್ಟಿದ್ದು, ಈ ಉಡುಪಿನ ಮಾರಾಟದಿಂದ ಬಂದ ಹಣವನ್ನು ಅವರು ಎಆರ್ ಓಎಚ್‍ಎ ಸಂಸ್ಥೆಯ `ಲಿಟರ್ ದ ಲೈಟರ್' ಕಾರ್ಯಕ್ರಮಕ್ಕೆ ನೀಡಿದ್ದಾರೆ. ಇದರಿಂದ ಮಂಡ್ಯದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ