'ನಾ ಪೇರು ಸೂರ್ಯ'ದಲ್ಲಿ ಮಿಲಿಟರಿ ಗೆಟಪ್ ನಲ್ಲಿ ಅಲ್ಲು ಅರ್ಜುನ್ (ವಿಡಿಯೋ ನೋಡಿ)

ಮಂಗಳವಾರ, 2 ಜನವರಿ 2018 (11:57 IST)
ಬೆಂಗಳೂರು: ಅಲ್ಲು ಅರ್ಜುನ್ ಅಂದರೆ ಸ್ಟೈಲಿಶ್ ಲುಕ್ ಕಣ್ಮುಂದೆ ಬರುತ್ತದೆ. ಅವರ ಪ್ರತಿ ಚಿತ್ರದಲ್ಲಿಯೂ ಒಂದು ಒಂದು ವಿಭಿನ್ನ ಲುಕ್ ಇರುತ್ತದೆ. ಸದಾ ಹೊಸತನದೊಂದಿಗೆ ಕಾಣಿಸಿಕೊಳ್ಳುವ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ‘ನಾ ಪೇರು ಸೂರ್ಯ’ ಚಿತ್ರದಲ್ಲಿಯೂ ಸಖತ್ ಸ್ಟೈಲಾಗಿ ಮಿಲಿಟರಿ ಆಫೀಸರ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ಇದೀಗ ಚಿತ್ರ ಕುರಿತಾದ ವಿಡಿಯೊವೊಂದು ಬಿಡುಗಡೆಯಾಗಿದ್ದು, ಮಿಲಿಟರಿ ಅಧಿಕಾರಿಯ ವೇಷದಲ್ಲಿ ಕಾಣಿಸಿಕೊಂಡಿರುವ ಅಲ್ಲು, ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದಾರೆ. ಈ  ಚಿತ್ರದಲ್ಲಿ ಭಿನ್ನವಾಗಿ ಕಾಣಬೇಕು ಎಂದು ಅಮೆರಿಕಾದಲ್ಲಿ ಒಂದು ತಿಂಗಳು ವಿಶೇಷ ದೈಹಿಕ ತರಬೇತಿ ಪಡೆದಿದ್ದಾರಂತೆ. ಏಪ್ರಿಲ್ 21ಕ್ಕೆ ಚಿತ್ರ ತೆರೆ ಕಾಣಲಿದೆ.




ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ