ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಅಮಲಾ ಪೌಲ ರೋಮ್ಯಾನ್ಸ್

ಶನಿವಾರ, 3 ಸೆಪ್ಟಂಬರ್ 2016 (10:15 IST)
ಅಗಸ್ಟ್ 29ರಂದು ಧನುಷ್ ತಮ್ಮ ಮುಂಬರುವ ಚಿತ್ರವನ್ನು ಘೋಷಣೆ ಮಾಡಿದ್ದರು. ರಜನಿಕಾಂತ್ ಅಳಿಯ ಧನುಷ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಾರೆ. ಇದೀಗ ಅಮಲಾ ಪೌಲ್ ರಜನಿಕಾಂತ್ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 

ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಈ ಅಮಲಾ ಫಿಮೇಲ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ  ಬರುತ್ತಿರುವ ಈ ಚಿತ್ರಕ್ಕೆ ಪಾ.ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. 
 
ರಜನಿಕಾಂತ್ ಜತೆಗೆ ಅಮಲಾ ಪೌಲ್ ಈ ಚಿತ್ರದಲ್ಲಿ ರೋಮ್ಯಾನ್ಸ್ ಮಾಡಲಿದ್ದಾರೆ. ಇದು ಅಮಲಾ ಪಾಲಿಗೆ ದೊಡ್ಡ ಹಿಟ್ ನೀಡಬಹುದು ಎಂದು ಹೇಳಲಾಗುತ್ತಿದೆ. ರಜನಿಕಾಂತ್ ಜತೆಗೆ ಲವ್ ಡ್ಯೋಯೆಟ್ ಹಾಡಲು ಅಮಲಾ ಪೌಲ್ ಬರುತ್ತಿದ್ದಾರೆ. ಇದು ರಜನಿಕಾಂತ್ ಹಾಗೂ ಅಮಲಾ ಪೌಲ್ ಅಭಿಮಾನಿಗಳಿಗೆ ಸರ್‌ಪ್ರೈಜ್ ನೀಡಲಿದೆ. 

ಧನುಷ್ ಪ್ರೋಡೆಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ರಜನಿಕಾಂತ್ ತಾವು ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈ ಬಗ್ಗೆ ಧನುಷ್ ಟ್ವಿಟರ್‌ ಬರೆದುಕೊಂಡಿದ್ದರು.
 
 ವಿಷೇಷವೆಂದರೆ ಕಬಾಲಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಪ.ರಂಜಿತ್ ಈ ಚಿತ್ರಕ್ಕೂ ನಿರ್ದೇಶನ ಮಾಡಲಿದ್ದಾರೆ. ಇದು ಕಬಾಲಿ ಪಾರ್ಟ್ 2 ಎಂದು ಹೇಳುತ್ತಿದ್ದರು ಇದುವರೆಗೂ ಅಧಿಕೃತವಾಗಿ ಮಾಹಿತಿ ಇಲ್ಲ. 
 
ಸದ್ಯ ರಜನಿಕಾಂತ್ ಸೈನ್ಸ್ ಫಿಕ್ಸನ್ 2.0 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಎಸ್.ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ ಬಾಲಿವುಡ್‌ನ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ರಜನಿಕಾಂತ್ ಜತೆಗೆ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ