ಅಮಿತಾಭ್ ಬಚ್ಚನ್ ಇನ್ನು 'ವಿಕೆಸಿ'ಯ ಬ್ರ್ಯಾಂಡ್ ಅಂಬಾಸಡರ್

ಶನಿವಾರ, 2 ಅಕ್ಟೋಬರ್ 2021 (14:29 IST)
ಬೆಂಗಳೂರು : ಫುಟ್ವೇರ್ ಕಂಪನಿ ವಿಕೆಸಿ ಜೊತೆ ಸಹಭಾಗಿತ್ವ ಹೊಂದುವ ಮೂಲಕ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ 50 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪುಟ್ವೇರ್ಗೆ ಬ್ರ್ಯಾಂಡ್ ಅಂಬಾಸಡರ್ ಆಗಲು ನಿರ್ಧರಿಸಿದ್ದಾರೆ.

ಸಾಂಕ್ರಾಮಿಕದ ಈ ಕಾಲದಲ್ಲಿ ಮೊದಲ ಬಾರಿಗೆ ಪುಟ್ವೇರ್ ಬ್ರ್ಯಾಂಡ್ ಅಂಬಾಸಡರ್ ಆಗುವ ಅಮಿತಾಭ್ ಬಚ್ಚನ್ ಅವರ ನಿರ್ಧಾರವು ಭಾರತದ ಶ್ರಮಶೀಲ ಮನೋಭಾವಕ್ಕೆ ಹೆಚ್ಚಿನ ಉತ್ಸಾಹ ತುಂಬುವುದು ಖಚಿತ ಎಂದು ವಿಕೆಸಿ ಸಂಸ್ಥೆ ಅಭಿಪ್ರಾಯಪಟ್ಟಿದೆ.
ವಿಕೆಸಿ ಗ್ರೂಪ್ ಭಾರತದ ಪುಟ್ವೇರ್ ಉದ್ಯಮದಲ್ಲಿ ಕ್ರಾಂತಿ ಉಂಟುಮಾಡಿದ್ದು, ಸಮೂಹ ಮಾರುಕಟ್ಟೆ ವಿಭಾಗ ಒಳಗೊಂಡಂತೆ ಎಲ್ಲಾ ಭಾರತೀಯರಿಗೂ ಕೈಗೆಟುಕುವಂತೆ ಮಾಡಲು ದೇಶದಲ್ಲಿ ಪಿಯು ಪುಟ್ವೇರ್ಗಳನ್ನು ಆರಂಭಿಸಿತು. ಈ ಬೆಳವಣಿಗೆಯಿಂದ ವಿಕೆಸಿ ಗ್ರೂಪ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪಿಯು ಪುಟ್ವೇರ್ ಬ್ರ್ಯಾಂಡ್ ಎನಿಸಿಕೊಂಡಿದೆ. ವಿಕೆಸಿ ಪ್ರೈಡ್ ತನ್ನ ಸದೃಢ ಗುಣಮಟ್ಟದಿಂದಾಗಿ ಅತ್ಯಂತ ಬೇಡಿಕೆಯ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಮತ್ತು ಪುಟ್ವೇರ್ ಉದ್ಯಮದಲ್ಲಿ ಹಣಕ್ಕೆ ತಕ್ಕ ಮೌಲ್ಯಕ್ಕಾಗಿ ಅತ್ಯಂತ ಪ್ರಸಿದ್ಧವಾದ ಪುಟ್ವೇರ್ ಉತ್ಪನ್ನವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಕಳೆದ ತಿಂಗಳು ವಿಕೆಸಿ ಪ್ರೈಡ್ ಭಾರತದಲ್ಲಿ ಪಿಯು ಪುಟ್ವೇರ್ ತಯಾರಿಕೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸುವ ಮೂಲಕ ಈಝಿ ಹೆಸರಿನ ಹೊಸ ಸಂಗ್ರಹ ಪ್ರಾರಂಭಿಸಿತು. ವಿಕೆಸಿ ಪ್ರೈಡ್ ಈಝಿ ಸಂಗ್ರಹವು ಭಾರತದ ಮೊದಲ ಸೂಪರ್ ಸಾಫ್ಟ್ ಪಿಯು ಪುಟ್ವೇರ್ ಎಂಬ ಅಪರೂಪದ ವಿಶೇಷತೆ ಹೊಂದಿದೆ ಎಂಬುದಾಗಿ ಸಂಸ್ಥೆ ಹೇಳಿದೆ.
ನಟ ಅಮಿತಾಭ್ ಬಚ್ಚನ್ ಅವರು ವಿಕೆಸಿ ಬ್ರ್ಯಾಂಡ್ ಅಂಬಾಸಡರ್ ಆಗುವ ಕುರಿತ ನಿರ್ಣಯ ಅಂತಿಮಗೊಳಿಸಿದ ಸಂದರ್ಭದಲ್ಲಿ ವಿಕೆಸಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ರಜಾಕ್, ನಿರ್ದೇಶಕರಾದ ವಿ.ರಫೀಕ್ ಮತ್ತು ವೇಣುಗೋಪಾಲ್ ಉಪಸ್ಥಿತರಿದ್ದರು.
ವಿಕೆಸಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲು ಮತ್ತು ನಮ್ಮ ಶ್ರಮದ ಸಾಮೂಹಿಕ ಮನೋಭಾವದ ಮೂಲಕ ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ಯಲು 'ಸೆಲೆಬ್ರೇಟ್ ಹಾರ್ಡ್ವರ್ಕ್'ಗಾಗಿ ಭಾರತದ ಜನರಿಗೆ ಸ್ಫೂರ್ತಿ ನೀಡಲು ನಾನು ಹೆಮ್ಮೆಪಡುತ್ತೇನೆ. ವಿಕೆಸಿ ಜತೆ ನಾನು ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪುಟ್ವೇರ್ ಬ್ರ್ಯಾಂಡ್ ಅನುಮೋದಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ಅಮಿತಾಭ್ ಬಚ್ಚನ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ