ನಟ ರಣಬೀರ್ ಕಪೂರ್ ಅವರಿಗೆ ಫಿದಾ ಆಗಿದ್ದ ಇನ್ನೊಬ್ಬ ನಟಿ ಯಾರು ಗೊತ್ತಾ...?

ಬುಧವಾರ, 17 ಜನವರಿ 2018 (07:14 IST)
ಮುಂಬೈ : ಬಾಲಿವುಡ್ ನ ನಟ ರಣಬೀರ್  ಕಪೂರ್ ಅವರ ಕ್ಯಾರೆಕ್ಟರ್ ನೋಡಿ ಫಿದಾ ಆಗಿದ್ದ ಬಾಲಿವುಡ್ ನಟಿಯರಾದ ಐಶ್ವರ್ಯ ರೈ, ಮಾಧುರಿ ದಿಕ್ಷೀತ್ ಅವರ ಸಾಲಿಗೆ ಈಗ ಇನ್ನೊಬ್ಬ ವಿವಾಹಿತ ನಟಿಯೊಬ್ಬಳ ಹೆಸರು ಕೇಳಿಬರುತ್ತಿದೆ.

 
ಹೌದು. ಬಾಲಿವುಡ್ ನ ವಿವಾಹಿತ ನಟಿ ದಿಯಾ ಮಿರ್ಜಾ ಅವರಿಗೆ ರಣಬೀರ್  ಕಪೂರ್ ಅಂದರೆ ತುಂಬಾ ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರು ಸಂಜಯ್ ದತ್ ಅವರ ಜೀವನ ಚರಿತ್ರೆಯಾಧಾರಿತ ಚಿತ್ರದಲ್ಲಿ ಮಾನ್ಯತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರು ಸಂದರ್ಶನವೊಂದರಲ್ಲಿ ‘ರಣಬೀರ್ ಕೆಲಸಕ್ಕೆ ಹೆಚ್ಚು ಮಹತ್ವ ನೀಡುತ್ತಾನೆ. ಮಾತಿಗಿಂತ ಕೆಲಸ ಹೆಚ್ಚು ಎನ್ನುವ ವ್ಯಕ್ತಿ ಆತ. ಶೂಟಿಂಗ್ ಜಾಗಕ್ಕೆ ಎಲ್ಲರಿಗಿಂತ ಮೊದಲೇ ಬರುವ ರಣಬೀರ್ ಶಾಂತವಾಗಿ ಯಾವಾಗ್ಲೂ ಸಂತೋಷದಿಂದಿರುತ್ತಾರೆ. ಅವರ ಕೆಲಸವನ್ನು ನಾನು ಗೌರವಿಸುತ್ತೇನೆ’ ಎಂದು ಹೊಗಳಿದ್ದಾರೆ.

 
ಈ ಹಿಂದೆ ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ರಣಬೀರ್ ಜೊತೆ ನಟಿಸಿದ್ದ ಐಶ್ವರ್ಯ ರೈ ಕೂಡ ಇದೇ ಮಾತನ್ನು ಹೇಳಿದ್ದರು ಹಾಗೆ ಮಾಧುರಿ ದಿಕ್ಷೀತ್ ಅವರು ಕೂಡ ಈ ಗುಣ ನೋಡಿ  ಅವರ ಜೊತೆ ಐಟಂ ಡಾನ್ಸ್ ಮಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ