ಇಂಡೋನೇಷ್ಯಾ ಸಂಗೀತಗಾರರ ಬಾಯಲ್ಲಿ ಈಗ ಬಾಹುಬಲಿ ಟೈಟಲ್ ಸಾಂಗ್: ಸಿಕ್ಕಾಪಟ್ಟೆ ಪಾಪ್ಯೂಲರ್ ಆಯ್ತು ವಿಡಿಯೋ

ಶುಕ್ರವಾರ, 14 ಜುಲೈ 2017 (08:18 IST)
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ಜಗತ್ತಿನೆಲ್ಲೆಡೆ ತನ್ನದೇ ಹವಾ ಕ್ರಿಯೇಟ್ ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಭಾರತೀಯರಲ್ಲಿ ಮಾತ್ರವಲ್ಲ ವಿಶ್ವದ ಜನಮಾನಸದಲ್ಲಿ ಬಾಹುಬಲಿ ಹಾಡು ಎಂಥಾ ಮೋಡಿ ಮಾಡಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. 
 
ಬಾಹುಬಲಿ ಟೈಟಲ್ ಸಾಂಗ್ ಈಗ ಇಂಡೋನೇಷ್ಯಾದ ಸಂಗೀತಗಾರರ ಬಾಯಲ್ಲಿ ಜಿನುಗುತ್ತಿರುವುದು ವಿಶೇಷ. ಇಂಡೋನೇಷ್ಯಾದಲ್ಲಿ ನಡೆದ ಒಂದು ಲೈವ್  ಪರ್ ಫಾರ್ಮೆನ್ಸ್ ನಲ್ಲಿ ಅಲ್ಲಿನ ಸಂಗೀತಗಾರರು ಬಾಹುಬಲಿ ಹಾಡನ್ನು ಹಾಡಿ ಸಂಭ್ರಮಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
 
 


ಅಲ್ಲದೇ ಭಾಷೆಯ ಗಂಧಗಾಳಿಯಿಲ್ಲದ ಇಂಡೋನೇಷ್ಯನ್ನರು ಮ್ಯೂಸಿಕ್ ಬ್ಯಾಂಡ್ ಗಳ ಜತೆ ಈ ಹಾಡನ್ನು ಎಷ್ಟು ಸರಾಗವಾಗಿ ಸಂಭ್ರಮದಿಂದ ಹಾಡಿ ಎಲ್ಲರ ಮನಸೂರೆಗೊಳಿಸುವ ಮೂಲಕ ಗಮನಸೆಳೆದಿರುವುದು ವಿಶೇಷ.
 

ವೆಬ್ದುನಿಯಾವನ್ನು ಓದಿ