₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

Sampriya

ಗುರುವಾರ, 31 ಜುಲೈ 2025 (18:38 IST)
Photo Credit X
ನವದೆಹಲಿ: ಅಧಿಕ ಮೌಲ್ಯದ ಸಾಲ ವಂಚನೆ ಪ್ರಕರಣದಲ್ಲಿ ತಮಿಳು ಚಲನಚಿತ್ರ ನಟ ಮತ್ತು ಸ್ವಯಂ ಘೋಷಿತ ವೈದ್ಯ ಎಸ್ ಶ್ರೀನಿವಾಸನ್ ಅವರನ್ನು ಬಂಧಿಸಲಾಗಿದೆ.  ಆರ್ಥಿಕ ಅಪರಾಧಗಳ ವಿಭಾಗವು ರಾಷ್ಟ್ರ ರಾಜಧಾನಿಯಲ್ಲಿ  'ಪವರ್‌ಸ್ಟಾರ್' ಎಂದೇ ಖ್ಯಾತಿ ಪಡೆದ ಶ್ರೀನಿವಾಸನ್‌ರನ್ನು ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. 

ಅಧಿಕಾರಿಗಳ ಪ್ರಕಾರ, ಶ್ರೀನಿವಾಸನ್ ಸಂಸ್ಥೆಗೆ 1,000 ಕೋಟಿ ರೂಪಾಯಿ ಸಾಲ ನೀಡುವುದಾಗಿ ಭರವಸೆ ನೀಡಿ, ₹5 ಕೋಟಿ ಸಾಲ ಪಡೆದು ವಂಚಿಸಿದ್ದರು. 

ಶ್ರೀನಿವಾಸನ್ ಅವರನ್ನು ಎರಡು ಬಾರಿ ‘ಘೋಷಿತ ಅಪರಾಧಿ’ ಎಂದು ನ್ಯಾಯಾಲಯ ಘೋಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2018ರಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತ, 1000 ಕೋಟಿ ಸಾಲ ಕೊಡಿಸುವ ನೆಪದಲ್ಲಿ ದೂರುದಾರ ಕಂಪನಿಗೆ 5 ಕೋಟಿ ವಂಚಿಸಿದ್ದ.

ಚಲನಚಿತ್ರ ನಿರ್ಮಾಣ ಮತ್ತು ವೈಯಕ್ತಿಕ ಬಳಕೆಗಾಗಿ ಹಣವನ್ನು ವಂಚನೆಯಿಂದ ತಿರುಗಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಚೆನ್ನೈನಲ್ಲಿ ಇದೇ ರೀತಿಯ ಆರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ

ದೆಹಲಿ ಪೋಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು ಸ್ಥಳೀಯ ಗುಪ್ತಚರ ಮತ್ತು ತಾಂತ್ರಿಕ ಕಣ್ಗಾವಲು ಸಹಾಯದಿಂದ ಶ್ರೀನಿವಾಸನ್‌ನನ್ನು ಚೆನ್ನೈನ ವನಗಾರಂ ಪ್ರದೇಶಕ್ಕೆ ಪತ್ತೆಹಚ್ಚಿದೆ. ಜುಲೈ 27 ರಂದು, ಅವರನ್ನು ಚೆನ್ನೈನ ಗೋಲ್ಡನ್ ಟ್ರೆಷರ್ ಅಪಾರ್ಟ್‌ಮೆಂಟ್‌ನಿಂದ ಬಂಧಿಸಲಾಯಿತು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ