ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

Sampriya

ಗುರುವಾರ, 31 ಜುಲೈ 2025 (19:21 IST)
Photo Credit X
ಬೆಂಗಳೂರು: ನಟ ದರ್ಶನ್ ಫ್ಯಾನ್ಸ್ ಜೀವಬೆದರಿಕೆ ಸಂಬಂಧ ನಟ ಪ್ರಥಮ್ ಅವರು ದರ್ಶನ್ ವಿರುದ್ಧ ಬಳಸಿದ ಪದಬಳಕೆ ಸರಿಯಾಗಿಲ್ಲ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ. 

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದಲ್ಲಿ ದರ್ಶನ್ ಸರ್ ಪರ ನಿಲ್ಲುತ್ತೇನೆ. 

ಚಿಟಿಕೆ ಹೊಡೆದು ವಿಗ್ ಬಗ್ಗೆ ಮಾತಾಡೋದು ಸರಿ ಇಲ್ಲ. ಪ್ರಥಮ್ ಮಾತಾಡೋದು ಸರಿ ಇಲ್ಲ. ಅವರಿಗೆ ಯಾರಾದ್ರೂ ಚಾಕು ತೋರಿಸಿದ್ರೆ ದೂರು ಕೊಡಬೇಕು. ಅವರನ್ನ ಬಿಟ್ಟು ದರ್ಶನ್ ಸರ್ ಬಗ್ಗೆ ಕೆಟ್ಟದಾಗಿ ಮಾತಾಡೋದು ಸರಿಯಲ್ಲ. ಏನು ಪ್ರೂವ್
ಮಾಡೋಕೆ ಹೋಗ್ತಿದ್ದಾರೆ ಗೊತ್ತಾಗ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ದರ್ಶನ್ ಅವರ ಬಗ್ಗೆ ಪ್ರಥಮ್ ಈ ರೀತಿ ಮಾತನಾಡಿರುವುದು ಕನ್ನಡ ಸಿನಿಮಾ ರಂಗದ ಪ್ರತಿಯೊಬ್ಬ ನಟನಿಗೂ ಬೇಜರಯಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ