ಬಾಲಿವುಡ್ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ತಮ್ಮ ಪತಿ ಜೀನ್ ಗುಡೆನಫ್ ಮತ್ತು ಮಕ್ಕಳಾದ ಗಿಯಾ ಮತ್ತು ಜೈ ಅವರೊಂದಿಗೆ 2025 ರ ಹೋಳಿ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಿದರು.
ಮಕ್ಕಳೊಂದಿಗಿನ ಸಂಭ್ರಮದ ಕ್ಷಣಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮಕ್ಕಳ ಮುಖಗಳನ್ನು ಎಮೋಜಿಯಿಂದ ಮುಚ್ಚಿದ್ದಾರೆ. ಇದುವರೆಗೂ ನಟಿ ತಮ್ಮ ಮಕ್ಕಳ ಮುಖವನ್ನು ರಿವೀಲ್ ಮಾಡಿಲ್ಲ.
ಈ ಫೋಟೋವನ್ನು ನೋಡಿ ನೆಟ್ಟಿಗರೊಬ್ಬರು. ಜೈ ಮತ್ತು ಗಿಯಾ ಅವರ ಮುಖಗಳನ್ನು ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಮನರಂಜನಾ ಜಗತ್ತಿನಲ್ಲಿರುವವಳು. ಮಕ್ಕಳು ಸಾಮಾನ್ಯರಂತೆ ಬದುಕಿ, ಆನಂದಿಸುವ ಸಲುವಾಗಿ ಅವರನ್ನು ಕ್ಯಾಮರಾದಿಂದ ದೂರು ಇಟ್ಟಿದ್ದೇನೆ ಎಂದು ನಯವಾಗಿ ಉತ್ತರಿಸಿದ್ದಾರೆ.
ಈ ಕಮೆಂಟ್ ನೋಡಿ ಒಬ್ಬ ಅಭಿಮಾನಿ "ಒಳ್ಳೆಯ ನಿರ್ಧಾರ ಮೇಡಂ" ಎಂದು ಬರೆದರೆ, ಇನ್ನೊಬ್ಬರು "ನಿಜ, ಅವರು ತಮ್ಮ ಬಾಲ್ಯವನ್ನು ಆನಂದಿಸಲಿ" ಎಂದು ಕಾಮೆಂಟ್ ಮಾಡಿದ್ದಾರೆ.