ಸತತ ಸೋಲಿನ ಬಳಿಕ ಸಂಭಾವನೆ ಇಳಿಸಿಕೊಂಡರಾ ಬಾಲಿವುಡ್ ನಟರು?
ಅಕ್ಷಯ್ ಕುಮಾರ್ ರಂತಹ ಘಟಾನುಘಟಿ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಾಣುತ್ತಿರುವುದು ಬಾಲಿವುಡ್ಡಿಗರ ಚಿಂತೆಗೆ ಕಾರಣವಾಗಿದೆ.
ಅಕ್ಷಯ್ ಕುಮಾರ್ ಒಂದು ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ. ಆದರೆ ಇದೀಗ ಪೃಥ್ವಿರಾಜ್ ಸೋಲಿನ ಬಳಿಕ ನಟ ಸಂಭಾವನೆ ಕಡಿಮೆ ಮಾಡಲು ಮುಂದಾಗಿದ್ದಾರಂತೆ. ಅವರು ಮಾತ್ರವಲ್ಲ, ನಟ ಟೈಗರ್ ಶ್ರಾಫ್ ಕೂಡಾ ಸಂಭಾವನೆ ವಿಚಾರದಲ್ಲಿ ರಾಜಿಯಾಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.