ತಮ್ಮದೇ ಮಾತು ಮರೆತು ಬಾಲಿವುಡ್ ಗೆ ಕಾಲಿಡಲಿದ್ದಾರಂತೆ ಮಹೇಶ್ ಬಾಬು

ಬುಧವಾರ, 3 ಆಗಸ್ಟ್ 2022 (09:00 IST)
ಮುಂಬೈ: ಬಾಲಿವುಡ್‍ ಗೆ ನನ್ನ ಸಂಭಾವನೆ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹೇಶ್ ಬಾಬು  ಈಗ ತಮ್ಮ ಮಾತನ್ನೇ ಮರೆತು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರಾ?

ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರೆ.

ಅದರಂತೆ ಹಿಂದಿಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಮೂಲಕ ಮಹೇಶ್ ಬಾಬು ಸಿನಿಮಾ ಹಿಂದಿ ಮಾರುಕಟ್ಟೆಗೆ ಕಾಲಿಡಲಿದೆ. ಆದರೆ ಈ ಹಿಂದೆ ಹಿಂದಿ ಸಿನಿಮಾ ಬಗ್ಗೆ ಇಂತಹ ಹೇಳಿಕೆ ನೀಡಿದ್ದ ಮಹೇಶ್ ಬಾಬುಗೆ ಈಗ ಹಿಂದಿ ಮಾರುಕಟ್ಟೆ ಯಾವ ರೀತಿ ಸ್ವಾಗತ ಕೋರಲಿದೆ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ