ಒಂದೇ ಒಂದು ಫೋಟೋದಲ್ಲಿ ಐಶ್ವರ್ಯ- ಅಭಿಷೇಕ್ ವಿಚ್ಛೇಧನ ವದಂತಿಗೆ ಬ್ರೇಕ್

Sampriya

ಮಂಗಳವಾರ, 4 ಮಾರ್ಚ್ 2025 (19:28 IST)
Photo Courtesy X
ಅಶುತೋಷ್ ಗೋವಾರಿಕರ್ ಅವರ ಪುತ್ರ ಕೋನಾರ್ಕ್ ಗೋವಾರಿಕರ್ ಇತ್ತೀಚೆಗೆ ನಿಯತಿ ಕನಕಿಯಾ ಜತೆ ಅದ್ಧೂರಿಯಾಗಿ ನೆರವೇರಿತು.  ಅಶುತೋಷ್ ಅವರೊಂದಿಗೆ ಕೆಲಸ ಮಾಡಿದ ಅನೇಕ ಸೆಲೆಬ್ರಿಟಿಗಳು ವಿವಾಹದ ಆರತಕ್ಷತೆ ಹಾಜರಾದರು.

ಅಮೀರ್ ಖಾನ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಗ್ರೇಸಿ ಸಿಂಗ್ ಸೇರಿದಂತೆ ಇತರ ಖ್ಯಾತನಾಮರು ರೆಡ್ ಕಾರ್ಪೆಟ್‌ನಲ್ಲಿ ಪೋಸ್ ನೀಡುವುದನ್ನು ನಾವು ನೋಡಿದ್ದೇವೆ. ಇದೀಗ ಆರತಕ್ಷತೆಯ ಕೆಲವು ಫೋಟೋಗಳು ವೈರಲ್ ಆಗಿವೆ. ಇನ್ನೂ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ದಂಪತಿ ಕೂಡ ಮದುವೆಗೆ ಬಂದಿದ್ದರು.

ಅಭಿಷೇಕ್ ಹಾಗೂ ಐಶ್ವರ್ಯ ಅವರ ವಿಚ್ಚೇಧನ ಸುದ್ದಿ ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ಜೋಡಿ ಆರತಕ್ಷತೆಯಲ್ಲಿ ಟ್ವಿನಿಂಗ್‌ ಆಗಿ ಕಾಣಿಸಿಕೊಂಡು, ತಮ್ಮ ನಡುವಿನ ವಿಚ್ಚೇಧನ ವದಂತಿಗೆ ಬ್ರೇಕ್ ನೀಡಿದರು.

ದಂಪತಿಗಳು ಬಿಳಿ ಬಣ್ಣದಲ್ಲಿ ಬಟ್ಟೆಯಲ್ಲಿ ಮಿಂಚಿದರು. ಚಿನ್ನದ ಸಂಕೀರ್ಣ ವಿನ್ಯಾಸದ ಬಿಳಿ ಚಿಕಂಕರಿ ಅನಾರ್ಕಲಿ ಡ್ರೆಸ್‌ನಲ್ಲಿ ಐಶ್ವರ್ಯಾ ಸುಂದರವಾಗಿ ಕಾಣಿಸಿಕೊಂಡರೆ, ಅಭಿಷೇಕ್ ಬಿಳಿ ಶೆರ್ವಾನಿ ಧರಿಸಿದ್ದರು.

ಐಶ್ವರ್ಯ ಅವರು 'ಜೋಧಾ ಅಕ್ಬರ್' ಚಿತ್ರದಲ್ಲಿ ಅಶುತೋಷ್ ಗೋವಾರಿಕರ್ ಅವರೊಂದಿಗೆ ಕೆಲಸ ಮಾಡಿದ್ದರೆ, ಅಭಿಷೇಕ್ ಅವರು ದೀಪಿಕಾ ಪಡುಕೋಣೆ ಸಹ-ನಟಿಸಿದ 'ಖೇಲಿನ್ ಹಮ್ ಜೀ ಜಾನ್ ಸೇ' ಚಿತ್ರ ನಿರ್ಮಾಪಕರೊಂದಿಗೆ ಸಹಕರಿಸಿದ್ದಾರೆ.
ವೈರಲ್ ಆದ ಇತರ ಫೋಟೋಗಳಲ್ಲಿ, ಅಭಿಷೇಕ್ ಮತ್ತು ಐಶ್ವರ್ಯಾ ಅಶುತೋಷ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ಮತ್ತು ವಧು-ವರರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ