ಟಿ20 ವಿಶ್ವಕಪ್ 2024: ಅಯ್ಯೋ.. ಟಿವಿ ಸ್ವಿಚ್ ಆಫ್ ಮಾಡಿ ತಪ್ಪು ಮಾಡಿಬಿಟ್ಟೆ ಎಂದ ಅಮಿತಾಭ್ ಬಚ್ಚನ್

Krishnaveni K

ಸೋಮವಾರ, 10 ಜೂನ್ 2024 (11:05 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರೋಚಕವಾಗಿ ಕೊನೆಗೊಂಡಿದೆ. ಈ ಪಂದ್ಯದಲ್ಲಿ ಭಾರತ ಸೋಲಬಹುದು ಎಂದು ಟಿವಿ ಸ್ವಿಚ್ ಆಫ್ ಮಾಡಿ ಮಲಗಿದ ಎಷ್ಟೋ ಮಂದಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ಒಬ್ಬರು.

ಅಮಿತಾಭ್ ಬಚ್ಚನ್ ಇದೀಗ ಫಲಿತಾಂಶದ ಬಳಿಕ ತಾವು ಹಾಗೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಕೇವಲ 119 ರನ್ ಗಳಿಗೆ ಆಲೌಟ್ ಆಗಿತ್ತು. ಪಾಕಿಸ್ತಾನ ಕೂಡಾ ಉತ್ತಮ ಆರಂಭ ಪಡೆದಿತ್ತು ಹೀಗಾಗಿ ಭಾರ ಸೋಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಮಳೆಯಿಂದಾಗಿ ಅಡೆತಡೆಗಳ ನಡುವೆಯೂ ಪಂದ್ಯ ನಡೆದು ಭಾರತ ಕೊನೆಯ ಓವರ್ ನಲ್ಲಿ ರೋಚಕವಾಗಿ ಪಂದ್ಯ ಗೆದ್ದುಕೊಂಡಿತ್ತು. ಆದರೆ ಭಾರತ ಗೆಲ್ಲಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಷ್ಟೋ ಮಂದಿ ಟಿವಿ ಆಫ್ ಮಾಡಿ ಬೆಚ್ಚಗೆ ಹೊದ್ದು ಮಲಗಿದ್ದರು. ಆದರೆ ಬೆಳಿಗ್ಗೆ ಎದ್ದು ನೋಡುವಾಗ ಭಾರತ ಗೆದ್ದಿರುವ ಸುದ್ದಿ ಎಷ್ಟೋ ಜನರಿಗೆ ಸಂತೋಷ ತಂದಿತ್ತು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸಿರುವ ಬಿಗ್ ಬಿ ಅಮಿತಾಭ್ ಬಚ್ಚನ್, ‘ಬಾಪ್ ರೇ, ಭಾರತ, ಪಾಕಿಸ್ತಾನ ಪಂದ್ಯ ವೀಕ್ಷಿಸುತ್ತಿದ್ದೆ. ಆದರೆ ಸೋಲಬಹುದು ಎಂದು ಟಿವಿ ಆಫ್ ಮಾಡಿದ್ದೆ. ಆದರೆ ಈಗ ಅಚಾನಕ್ ಆಗಿ ಇಂಟರ್ನೆಟ್ ನೋಡಿದರೆ ನಾವು ಗೆದ್ದಿದ್ದೇವೆ!!’ ಎಂದು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಟಿವಿ ಆಫ್ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ