ಬಾಲಿವುಡ್ ನ ಈ ನಟ ನಟಿಯರ ವಿರುದ್ಧ ಅಮೇರಿಕಾದಲ್ಲಿ ಮೊಕದ್ದಮೆ ದಾಖಲು

ಶನಿವಾರ, 16 ಜೂನ್ 2018 (08:42 IST)
ಮುಂಬೈ : ಸಂಗೀತ ಕಾರ್ಯಕ್ರಮಕ್ಕೆ ನೀಡಿದ ಮುಂಗಡ ಹಣದ ವಿಚಾರಕ್ಕೆ ಸಂಬಂಧಿಸಿದಂತೆ  ಬಾಲಿವುಡ್ ನ ಸ್ಟಾರ್ ನಟ-ನಟಿಯರ ವಿರುದ್ಧ ಅಮೇರಿಕಾದಲ್ಲಿ ಮೊಕದ್ದಮೆ  ದಾಖಲಾಗಿದೆಯಂತೆ.


ಹೌದು. ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟ ರಣವೀರ್ ಸಿಂಗ್, ನಿರ್ದೇಶಕ ಪ್ರಭುದೇವ್, ನಟಿಯರಾದ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ ಹಾಗೂ ನಟ ಅಕ್ಷಯ್ ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿ ಕೊಡುವುದಾಗಿ ಹೇಳಿ ಮುಂಗಡವಾಗಿ ಹಣ ಪಡೆದು ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ಕೈ ಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಚಿಕಾಗೋ ಮೂಲದ ವಿಬ್ರಾಂತ್ ಮಾಧ್ಯಮ ಸಮೂಹ ಇಲ್ಲಿನೊಯಿಸ್ ಉತ್ತರ ಜಿಲ್ಲಾ ನ್ಯಾಯಾಲಯದಲ್ಲಿ ಜೂ.10 ರಂದು ದೂರು ದಾಖಲಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ