ನಟಿ ದೀಪಿಕಾ ಪಡುಕೋಣೆಗೆ ಮತ್ತೆ ಅನಾರೋಗ್ಯ

ಬುಧವಾರ, 28 ಸೆಪ್ಟಂಬರ್ 2022 (09:40 IST)
ಮುಂಬೈ: ಇತ್ತೀಚೆಗೆ ಪ್ರಭಾಸ್ ನಾಯಕರಾಗಿರುವ ಪ್ರಾಜೆಕ್ಟ್ ಕೆ ಸಿನಿಮಾ ಶೂಟಿಂಗ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ದೀಪಿಕಾ ಪಡುಕೋಣೆ ಈಗ ಮತ್ತೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಮುಂಬೈನಲ್ಲಿ ತಮ್ಮ ಮನೆಯಲ್ಲಿದ್ದ ವೇಳೆ ಅನಾರೋಗ್ಯಕ್ಕೀಡಾಗಿರುವ ದೀಪಿಕಾರನ್ನು ತಕ್ಷಣವೇ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲಾಗಿದೆ.

ಆದರೆ ನಿಜವಾಗಿ ಅವರಿಗೆ ಆದ ಸಮಸ್ಯೆ ಏನೆಂಬುದರ ಬಗ್ಗೆ ಯಾರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ