ಹೆಂಡ್ತಿ ಮಲಗೋದೇ ಕಷ್ಟ ಎಂದ ರಣಬೀರ್ ಕಪೂರ್!

ಮಂಗಳವಾರ, 27 ಸೆಪ್ಟಂಬರ್ 2022 (09:10 IST)
ಮುಂಬೈ: ಕೆಲವೇ ದಿನಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಣಬೀರ್ ಕಪೂರ್ ಈಗ ತಮ್ಮ ಗರ್ಭಿಣಿ ಪತ್ನಿ ಅಲಿಯಾ ಭಟ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಕಳೆದ ಮೇನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್-ಅಲಿಯಾ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೆಂಡತಿ ಅಲಿಯಾ ಜೊತೆ ಎಲ್ಲಕ್ಕಿಂತ ಹೆಚ್ಚು ಕಷ್ಟ ಬೆಡ್ ಮೇಲೆ ಮಲಗೋದು ಎಂದಿದ್ದಾರೆ ರಣಬೀರ್.

‘ಅಲಿಯಾ ಜೊತೆ ಬೆಡ್ ಹಂಚಿಕೊಳ್ಳುವುದು ಎಲ್ಲಕ್ಕಿಂತ ಕಷ್ಟ. ಅವಳ ಜೊತೆ ಬೆಡ್ ಮಲಗೋದಕ್ಕೆ ತುಂಬಾ ಕಷ್ಟಪಡುತ್ತೇನೆ. ಅವಳು ಮಲಗುವಾಗ ಒಂದು ರೀತಿ ಇರುತ್ತಾಳೆ. ಆ ಬಳಿಕ ಅವಳ ಕಾಲು ಒಂದು ಕಡೆ ತಲೆ ಇನ್ನೊಂದು ಕಡೆ. ಕೊನೆಗೆ ನನಗೆ ಮಲಗಲು ಕೊಂಚವೇ ಜಾಗ ಉಳಿದಿರುತ್ತದೆ. ಇದರಿಂದ ನನಗೆ ಕಷ್ಟವಾಗುತ್ತದೆ’ ಎಂದು ರಣಬೀರ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ