ದಿಶಾ ಪಟಾನಿ, ಟೈಗರ್ ಶ್ರಾಫ್ ಬಾಳಿನಲ್ಲಿ ಬಿರುಕು

ಮಂಗಳವಾರ, 25 ಜೂನ್ 2019 (19:39 IST)
ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಹಾಟ್ ನಟಿ ದಿಶಾ ಪಟಾನಿ ಲವ್‌ಬರ್ಡ್ಸ್‌ಗಳ ಮಧ್ಯೆ ಬಿರುಕು ಉಂಟಾಗಿದ್ದು ಪ್ರತ್ಯೇಕವಾಗಲು ಬಯಸಿದ್ದಾರೆ ಎನ್ನುವ ವರದಿಗಳು ಬಾಲಿವುಡ್‌ನಲ್ಲಿ ಕೋಲಾಹಲ ಸೃಷ್ಟಿಸಿವೆ.
ಕೆಲ ಮಾಧ್ಯಮಗಳು ಟೈಗರ್ ಶ್ರಾಫ್ ಮತ್ತು ದಿಶಾ  ಪಟಾನಿ ತಮ್ಮ ಸಂಬಂಧವನ್ನು ಅಂತ್ಯಗೊಳಿಸಲು ಬಯಸಿದ್ದಾರೆ ಎನ್ನುವ ವರದಿಗಳನ್ನು ಬಿತ್ತರಿಸುತ್ತಿವೆ.
 
ಕಳೆದ ಕೆಲ ವಾರಗಳಿಂದ ದಿಶಾ ಪಟಾನಿ ಮತ್ತು ಟೈಗರ್ ತುಂಬಾ ಕಠಿಣವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೀಗ ಅವರು ಪ್ರತ್ಯೇಕವಾಗಿರಲು ಬಯಸಿದ್ದಾರೆ. ಅಧಿಕೃತವಾಗಿ ಪರಸ್ಪರರು ಬೇರೆ ಬೇರೆಯಾಗಿದ್ದಾರೆ ಎನ್ನುವ ವರದಿಗಳು ಬಹಿರಂಗವಾಗಿವೆ.
 
ಕಳೆದ ವಾರ ಮುಂಬೈನ ರೆಸ್ಟುರೆಂಟ್‌ನಿಂದ ಹೊರಬಂದ ದಿಶಾ ಮತ್ತು ಟೈಗರ್‌ಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ದಿಶಾರೊಂದಿಗೆ ಫೋಟೋ ಕ್ಲಿಕ್ಕಿಸಲು ಅಭಿಮಾನಿಗಳು ಬಯಸಿದ್ದರು. ಆದರೆ, ಟೈಗರ್ ದಿಶಾರನ್ನು ಅಭಿಮಾನಿಗಳಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
 
ಕಳೆದ 2016 ರಿಂದ ಡೇಟಿಂಗ್‌ನಲ್ಲಿರುವ ಟೈಗರ್ ಮತ್ತು ದಿಶಾ ಭಾರತ್ ಚಿತ್ರದ ಪ್ರೀಮಿಯರ್‌ನಲ್ಲಿ ಅಧಿಕೃತವಾಗಿ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಎರಡು ವರ್ಷಗಳ ಬಾಂಧವ್ಯಕ್ಕೆ ಇತಿಶ್ರೀ ಹಾಡಿರುವುದು ಅಭಿಮಾನಿಗಳಲ್ಲಿ ತುಂಬಾ ನೋವು ತಂದಿದೆ.
 
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಭಾರತ್ ಚಿತ್ರದಲ್ಲಿ ದಿಶಾ ನಟಿಸಿದ್ದರು. ಇದೀಗ ದಿಶಾ, ಅನಿಲ್ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಮುಂದಿನ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಟೈಗರ್ ಶ್ರಾಫ್ ಸ್ಟುಡೆಂಟ್ ಆಫ್ ದಿ ಇಯರ್ 2 ಚಿತ್ರದಲ್ಲಿ ನಟಿಸಿದ್ದು, ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ಚಿತ್ರದಲ್ಲಿ ಅಭಿನಯಿಸುದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ