ಶಾರುಖ್ ಖಾನ್ ಹಿಂದೆ ಬಿದ್ದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು!

ಮಂಗಳವಾರ, 25 ಜೂನ್ 2019 (09:14 IST)
ಮುಂಬೈ: ಬಾಲಿವುಡ್ ಸ್ಟಾರ್ ನಟರೆಂದರೆ ಪಾಕಿಸ್ತಾನದವರೂ ಆರಾಧಿಸುತ್ತಾರೆ. ಬಾಲಿವುಡ್ ಸಿನಿಮಾಗಳಲ್ಲಿ ಅದೆಷ್ಟೋ ಪಾಕ್ ಕಲಾವಿದರೂ ಕೆಲಸ ಮಾಡುತ್ತಾರೆ. ಆದರೆ ಪಾಕಿಸ್ತಾನದ ಈ ಇಬ್ಬರು ಕ್ರಿಕೆಟ್ ಪ್ರೇಮಿಗಳ ಬೇಡಿಕೆ ಮಾತ್ರ ವಿಚಿತ್ರವಾಗಿದೆ.


ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಸೋತಿದ್ದಕ್ಕೆ ಕ್ರಿಕೆಟಿಗರ ಆಹಾರ ಕ್ರಮವೇ ಕಾರಣ ಎಂದು ದೂರಿರುವ ಇಬ್ಬರು ಅಭಿಮಾನಿಗಳು ಇದರಿಂದಾಗಿ ನಮ್ಮ ಸಮಯ ಹೇಗೆ ಹಾಳಾಗುತ್ತಿದೆ ಎಂದು ವಿವರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅಷ್ಟೇ ಅಲ್ಲದೆ, ಆ ವಿಡಿಯೋವನ್ನು ನಟಿ ಮಹಿರಾ ಖಾನ್, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡಾ ರಿಟ್ವೀಟ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮ್ಮ ವಿಡಿಯೋ ಇನ್ನಷ್ಟು ಜನರಿಗೆ ತಲುಪಬೇಕಾದರೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಶೇರ್ ಮಾಡಬೇಕು ಎಂಬ ವಿಚಿತ್ರ ಬೇಡಿಕೆಯನ್ನು ಈ ಅಭಿಮಾನಿಗಳು ಮುಂದಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ