ಇನ್‍ಸ್ಟಾಗ್ರಾಮ್‌ನಲ್ಲಿ ರಾಖಿ ಸಾವಂತ್ ಹಾಗೂ ಮಹಿಕಾ ಶರ್ಮಾ ಜಗಳ ಮಾಡಿಕೊಂಡಿದ್ಯಾಕೆ ಗೊತ್ತಾ?

ಶನಿವಾರ, 30 ಜೂನ್ 2018 (13:34 IST)
ಮುಂಬೈ : ಬಾಲಿವುಡ್ ನಟಿ ರಾಖಿ ಸಾವಂತ್ ಅವರಿಗೆ ತಮಾಷೆ ಮಾಡಲು ಹೋಗಿ ಹಿರಿಯ ತಾರೆ ಮಹಿಕಾ ಶರ್ಮಾ ಅವರು ರಾಖಿ ಸಾವಂತ್ ಅವರ  ಕೋಪಕ್ಕೆ ಕಾರಣರಾಗಿದ್ದಾರೆ.


ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಮಾತನಾಡುತ್ತಾ ಹಿರಿಯ ತಾರೆ ಮಹಿಕಾ ಶರ್ಮಾ ಅವರು ಇನ್‍ಸ್ಟಾಗ್ರಾಮ್‌ನಲ್ಲಿ ತಮಾಷೆಗಾಗಿ ‘’ತಂಗಿ ಪ್ಲಾಸ್ಟಿಕ್ ಬ್ಯಾನ್ ಬಗ್ಗೆ ಸ್ವಲ್ಪ ಅರಿವನ್ನು ನನಗೆ ಮೂಡಿಸುತ್ತೀರಾ. ಕಾಂಡೋಮ್‌ ಗಳು ಸಹ ಬ್ಯಾನ್ ಆಗಿವೆಯೇ?" ಎಂಬ ಒಂದು ಸಂದೇಶವನ್ನು ಹಾಕಿದರು.


ಇದನ್ನು ನೋಡಿದ ನಟಿ ರಾಖಿ ಸಾವಂತ್ ಅವರು ಕೆಂಡಾಮಂಡಲವಾಗಿ ಅಸಭ್ಯವಾಗಿ ಬೈಯುತ್ತಾ ವಿಡಿಯೋಗಳನ್ನೂ ಹಾಕಿದ್ದಾರೆ. ‘’ಕಾಂಡೋಮ್ ಬಗ್ಗೆ ನನಗೆ ಗೊತ್ತಿದೆ. ಅವು ರಬ್ಬರ್ ಅಲ್ಲದೆ ಪ್ಲಾಸ್ಟಿಕ್‌ನಲ್ಲೇ ತಯಾರಿಸುತ್ತಾರೆ. ಒಂದು ವೇಳೆ ಕಾಂಡೋಮ್ ಬ್ಯಾನ್ ಮಾಡಿದರೆ ಮಹಿಕಾ ತರಹದವರು ಏಡ್ಸ್ ಬಂದು ಸಾಯುತ್ತಾರೆ’’ ಎಂದು ಪೋಸ್ಟ್ ಮಾಡಿದರು. ಇದಕ್ಕೆ ಮಹಿಕಾ ಕೂಡ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಇಬ್ಬರ ನಡುವೆ ಆರಂಭವಾದ ತಮಾಷೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ