ಕಿಕಿ ಚಾಲೆಂಜ್ ನಿಂದ ಈ ನಟಿ ಅನುಭವಿಸಿದ ಕಷ್ಟವೇನು ಗೊತ್ತಾ...?
ಶುಕ್ರವಾರ, 3 ಆಗಸ್ಟ್ 2018 (07:39 IST)
ಮುಂಬೈ : ಇತ್ತೀಚೆಗೆ ಕಿಕಿ ಚಾಲೆಂಜ್ ಕಿರಿಕಿರಿ ಹೆಚ್ಚಾಗುತ್ತಿದ್ದು, ಈ ಚಾಲೆಂಜ್ ಅಪಾಯಕಾರಿ ಎಂದು ಪೊಲೀಸರು ಬ್ಯಾನ್ ಮಾಡಿದ್ರು ಕೂಡ ಅನೇಕರು ಅದನ್ನು ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಶೆನಾಜ್ ಟ್ರೆಜರಿವಾಲಾ ಅವರು ವಿಡಿಯೋವೊಂದರ ಮೂಲಕ ಕಿಕಿ ಚಾಲೆಂಜ್ ನಿಂದ ಯಾವರೀತಿ ಕಷ್ಟಗಳು ಎದುರಾಗುತ್ತವೆ ಎಂಬುದನ್ನು ತಿಳಿಸಿದ್ದಾರೆ.
ನಟಿ ಶೆನಾಜ್ ಟ್ರೆಜರಿವಾಲಾ ಅವರು ಸ್ವಿಟ್ಜರ್ಲೆಂಡ್ ನ ರೈಲು ನಿಲ್ದಾಣದಲ್ಲಿ ಕಿಕಿ ಚಾಲೆಂಜ್ ಪೂರ್ಣಗೊಳಿಸಲು ಮುಂದಾಗಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ಕೆಳಗಿಳಿದ ಶೆನಾಜ್ ಡಾನ್ಸ್ ಮಾಡಲು ಶುರು ಮಾಡ್ತಾರೆ. ಡಾನ್ಸ್ ನಲ್ಲಿ ಎಷ್ಟು ಮಗ್ನರಾಗಿದ್ದಾರೆ ಎಂದರೆ ರೈಲಿನ ಬಾಗಿಲು ಮುಚ್ಚಿದ್ದೆ ಅವರಿಗೆ ಗೊತ್ತಾಗೋದಿಲ್ಲ. ರೈಲು ಮುಂದೆ ಹೋಗ್ತಿದ್ದಂತೆ ಎಚ್ಚೆತ್ತ ಶೆನಾಜ್ ರೈಲಿನ ಹಿಂದೆ ಓಡ್ತಾರೆ.
ಈ ವಿಡಿಯೋವನ್ನು ಶೆನಾಜ್ ಸಾಮಾಜಿಕ ಜಾಲತಾಣ ಹಾಕಿ ಕಿಕಿ ಚಾಲೆಂಜ್ ಪೂರ್ಣಮಾಡಲು ಮುಂದಾದ್ರೆ ಈ ಎಲ್ಲ ಕಷ್ಟ ಅನುಭವಿಸಬೇಕೆಂದು ಶೀರ್ಷಿಕೆ ಹಾಕಿದ್ದಾರೆ. ಶೆನಾಜ್ ಈ ವಿಡಿಯೋವನ್ನು ಈವರೆಗೆ 5.5 ಲಕ್ಷ ಬಾರಿ ವೀಕ್ಷಣೆ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ