ಅಯ್ಯೋ ಪಾಪಾ ಟೀಂ ಇಂಡಿಯಾದ ಆಟಗಾರ ರಾಹುಲ್ ಗೆ ಅಭಿಮಾನಿಗಳು ಹೀಗೆನ್ನುತ್ತಿರುವುದ್ಯಾಕೆ ?

ಶುಕ್ರವಾರ, 20 ಜುಲೈ 2018 (06:39 IST)
ಮುಂಬೈ : ಸಾಮಾಜಿಕ ಜಾಲತಾಣದಲ್ಲಿ  ಟೀಮ್ ಇಂಡಿಯಾದ ಮೋಸ್ಟ್​ ಸ್ಟೈಲಿಷ್​​​ ಪ್ಲೇಯರ್ ಕೆ.ಎಲ್​. ರಾಹುಲ್ ಬಗ್ಗೆ ಅಭಿಮಾನಿಗಳು ಅಯ್ಯೋ ಪಾಪಾ ಅಂತಿದ್ದಾರೆ.`  

  
ಅಭಿಮಾನಿಗಳು  ಯಾಕೆ ರಾಹುಲ್  ಅವರಿಗೆ ಹೀಗೆ ಹೇಳುತ್ತಿದ್ದಾರೆ ಎಂಬ ಕುತೂಹಲ ಹಲವರಲ್ಲಿರಬಹುದು. ಇದಕ್ಕೆ ಕಾರಣ ಇಷ್ಟೇ ಇತ್ತೀಚಿಗೆ ಬಾಲಿವುಡ್​​ ನಟಿ ನಿಧಿ ಅಗರ್​ವಾಲ್​ ಜೊತೆ ರಾಹುಲ್​ ಮುಂಬೈನ ರೆಸ್ಟೋರೆಂಟ್​​ ಒಂದರ ಮುಂದೆ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಕೆಲವರು ಇವರಿಬ್ಬರ ನಡುವೆ ಲವ್ವಿ-ಡುವ್ವಿ ಶುರುವಾಗಿದೆ ಅಂತ ಅಂದುಕೊಂಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಇವರು, ನಾವಿಬ್ರು ಫ್ರೆಂಡ್ಸ್​​ ಅಷ್ಟೇ ಅಂತ ​ಈ ರೂಮರ್ಸ್​​ಗೆ ತೆರೆ ಎಳೆದಿದ್ದರು.


ಆದರೆ ಈಗ ನಟಿ ನಿಧಿ ಅಗರ್​ವಾಲ್​ ಅವರು ಒಂದು ಹೆಜ್ಜೆ ಮುಂದೆ ಹೋಗಿ , ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ರಾಹುಲ್  ಅವ​ರಿಗೆ ಆಲ್​ ದಿ ಬೆಸ್ಟ್​​ ಬ್ರೋ ಎಂದು ಬರೆದು  ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ರಾಹುಲ್​ ಮೇಲೆ ಅಯ್ಯೋ ಪಾಪಾ ಎನ್ನುತ್ತಾ ಸಹಾನುಭೂತಿ ತೋರುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ