ನಟಿ ಶ್ರೀರೆಡ್ಡಿ ಜೊತೆ ಸಿನಿಮಾ ಮಾಡಲು ಮುಂದಾದ ಖ್ಯಾತ ನಿರ್ದೇಶಕ ಯಾರು…?

ಶುಕ್ರವಾರ, 27 ಏಪ್ರಿಲ್ 2018 (06:40 IST)
ಹೈದರಾಬಾದ್ : 'ಕಾಸ್ಟಿಂಗ್ ಕೌಚ್' ಬಗ್ಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಅರೆಬೆತ್ತಲೆ ಪ್ರತಿಭಟನೆ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ತೆಲುಗು ನಟಿ ಶ್ರೀರೆಡ್ಡಿ ಅವರಿಗೆ ಇದೀಗ ಖ್ಯಾತ ನಿರ್ದೇಶಕರೊಬ್ಬರು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.


ನಟಿ ಶ್ರೀರೆಡ್ಡಿ ಅವರು 'ಕಾಸ್ಟಿಂಗ್ ಕೌಚ್' ಬಗ್ಗೆ ಮಾಡಿದ ಪ್ರತಿಭಟನೆಯ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮಾತ್ರ ಶ್ರೀರೆಡ್ಡಿಯ ಬೆಂಬಲಕ್ಕೆ ನಿಂತಿದ್ದರು. ಶ್ರೀರೆಡ್ಡಿಯ ವಿರುದ್ಧ ಟೀಕೆ ಮಾಡಿದವರ ಮೇಲೆ ಕಿಡಿಕಾರಿದ್ದರು.


ಆದರೆ ಇದೀಗ ಅವರು ಶ್ರೀರೆಡ್ಡಿ ನಿಭಾಯಿಸಬಲ್ಲರು ಎಂಬ ಪಾತ್ರ ಇದ್ದರೇ ಖಂಡಿತಾ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದು  ಭರವಸೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ