ಬ್ರಹ್ಮಾಸ್ತ್ರ ಕೋಟಿ ಕೋಟಿ ಗಳಿಕೆ ಸುಮ್ಮನೇ ಬಿಲ್ಡಪ್ಪಾ?

ಬುಧವಾರ, 14 ಸೆಪ್ಟಂಬರ್ 2022 (08:40 IST)
ಮುಂಬೈ: ರಣಬೀರ್ ಕಪೂರ್-ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿರುವ ಬಾಲಿವುಡ್ ಸಿನಿಮಾ ಬ್ರಹ್ಮಾಸ್ತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿ 50 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಹರಡಿತ್ತು.

ಆದರೆ ಇದೆಲ್ಲಾ ಸುಳ್ಳು. ಬ್ರಹ್ಮಾಸ್ತ್ರ ಗಳಿಕೆ ಸುದ್ದಿಗಳೆಲ್ಲಾ ಅಂತೆ ಕಂತೆಗಳಷ್ಟೇ. ಅಸಲಿಗೆ ಈ ಸಿನಿಮಾವೂ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾ ಕತೆ ನಾಗಿಣಿ ಧಾರವಾಹಿಯ ಮುಂದುವರಿದ ಭಾಗ ಎಂದು ಹಲವರು ಟೀಕಿಸಿದ್ದರು. ಈ ಸಿನಿಮಾ ಪ್ರದರ್ಶನವಾಗುತ್ತಿರುವ ಹಲವು ಥಿಯೇಟರ್ ಗಳಲ್ಲಿ ಖಾಲಿ ಹೊಡೆಯುತ್ತಿರುವ ದೃಶ್ಯಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ಈ ಸಿನಿಮಾವೂ ತೋಪಾಗಿದೆ. ಆದರೆ ಕೋಟಿ ಕೋಟಿ ಗಳಿಕೆ ಮಾಡಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ