'ವೀರೆ ಕಿ ವೆಡ್ಡಿಂಗ್' ಚಿತ್ರದಲ್ಲಿನ ಗೀತ್ ಪಾತ್ರ ನನಗೆ ಸಂಬಂಧಿಸಿದೆ - ಕೃತಿ ಖರಬಂದ

ನಾಗಶ್ರೀ ಭಟ್

ಗುರುವಾರ, 1 ಮಾರ್ಚ್ 2018 (18:51 IST)
ಮುಂಬರಲಿರುವ ಕುಟುಂಬ ಮನೋರಂಜನಾ ಚಿತ್ರ 'ವೀರೆ ಕಿ ವೆಡ್ಡಿಂಗ್' ನಲ್ಲಿ ಕೃತಿ ಖರಬಂದಾ ಗೀತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ವೀರೆ ಪಾತ್ರದಲ್ಲಿ ಅಭಿನಯಿಸುತ್ತಿರುವ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರಂತೆ.

ಅವರ ಹಿಂದಿನ ಚಿತ್ರದಂತೆ ಖರಬಂದಾ ಇನ್ನೊಮ್ಮೆ ಚಿತ್ರದಲ್ಲಿ ವಧುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ, ಆದರೆ ಪ್ರತಿಯೊಂದು ಪಾತ್ರವೂ ಹೊಸ ಸವಾಲನ್ನು ನೀಡುತ್ತದೆ ಎಂದು ಕೃತಿ ಹೇಳುತ್ತಾರೆ.
 
ತಮ್ಮ ಪಾತ್ರದ ಕುರಿತು ಮಾತನಾಡುತ್ತಾ ಕೃತಿ, "ಗೀತ್ ಕಷ್ಟ, ಆದರೆ, ಅದೇ ಸಮಯದಲ್ಲಿ ಅವಳು ಪ್ರಶಂಸನೀಯವಾಗಿದ್ದಾಳೆ. ಅವಳು ಜೀವನದಲ್ಲಿ ಸರಳವಾದ ವಿಷಯಗಳನ್ನು ಬಯಸುತ್ತಾಳೆ, ಆದರೆ ಸಂಬಂಧದಲ್ಲಿರುವಾಗ ಬೇಡಿಕೆಯಿರುತ್ತದೆ. ವೀರೆಗೆ ತನ್ನ ಕುರಿತು ಇರುವ ಪ್ರೀತಿಯನ್ನು ತನ್ನಲ್ಲಿ ಮಾತ್ರ ವ್ಯಕ್ತಪಡಿಸಬೇಕು ಪ್ರಪಂಚಕ್ಕಲ್ಲ ಎಂದು ಅವಳು ಬಯಸುತ್ತಾಳೆ. ನಾನು ಗೀತ್‌ಗೆ ಸಂಬಂಧಿಸಬಲ್ಲೆ" ಎಂದು ಹೇಳಿದ್ದಾರೆ. 'ಶಾದಿ ಮೆ ಜರೂರ್ ಆನಾ' ಚಿತ್ರದ ನಂತರ ಹಿಂದಿಯಲ್ಲಿ ಕೃತಿ ಖರಂಬಂದ ಅವರ ಎರಡನೇ ಚಿತ್ರ ಇದಾಗಿದ್ದು ಕೃತಿ ಈ ಚಿತ್ರದ ಕುರಿತು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
 
'ವೀರೆ ಕಿ ವೆಡ್ಡಿಂಗ್' ಚಿತ್ರವನ್ನು ಅಶು ತ್ರಿಖಾ ನಿರ್ದೇಶಿಸಿದ್ದು ಪುಲ್ಕಿತ್ ಸಾಮ್ರಾಟ್, ಕೃತಿ ಖರಬಂದ ಮತ್ತು ಜಿಮ್ಮಿ ಶೆರ್ಗಿಲ್ ಈ ಚಿತ್ರದಲ್ಲಿನ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಜತ್ ಭಕ್ಷಿ ಮತ್ತು ಪ್ರಮೋದ್ ಗೊಂಬರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಮಾರ್ಚ್ 2, 2018 ರಂದು ಈ ವರ್ಷದ ಹೋಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ