ಕಿಕ್ ಚಿತ್ರವು 2009 ರ ತೆಲುಗು ಚಿತ್ರ ಕಿಕ್ ಮತ್ತು ತಮಿಳು ಚಿತ್ರ ಥಿಲ್ಲಾಲಂಗಡಿಯ ಅಧಿಕೃತ ರಿಮೇಕ್ ಆಗಿತ್ತು. ಕಿಕ್ ಚಿತ್ರದ ಮೊದಲ ಭಾಗದಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫೆರ್ನಾಂಡಿಸ್, ರಂದೀಪ್ ಹೂಡ್ಡಾ ಮತ್ತು ನವಾಝುದ್ದೀನ್ ಸಿದ್ದಿಕಿ ಅವರು ನಟಿಸಿದ್ದರು. ಈ ಚಿತ್ರವು ಸಲ್ಮಾನ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಆದರೆ ತಯಾರಕರು ಈವರೆಗೂ ಕಿಕ್ 2 ಚಿತ್ರದಲ್ಲಿ ನಟಿಸಿರುವ ನಾಯಕಿಯ ಹೆಸರನ್ನು ಬಹಿರಂಗ ಪಡಿಸಿಲ್ಲ.
ಸಲ್ಮಾನ್ ಖಾನ್ ಪ್ರಸ್ತುತವಾಗಿ ರೆಮೋ ಡಿ'ಸೋಜಾ ಅವರ ರೇಸ್ 3 ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಜಾಕ್ಲೀನ್ ಫರ್ನಾಂಡಿಸ್, ಬಾಬಿ ಡಿಯೋಲ್, ಸಾಕಿಬ್ ಸಲೀಮ್, ಡೈಸಿ ಷಾ ಮತ್ತು ಅನಿಲ್ ಕಪೂರ್ ಸಹ ರೇಸ್ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.