ಬಾಲಿ ಬೀಚ್ ನಲ್ಲಿ ಜಾಕ್ವೆಲಿನ್ ಫೋಟೋ ನೋಡಿದ್ದೀರಾ…?

ಶನಿವಾರ, 30 ಡಿಸೆಂಬರ್ 2017 (14:34 IST)
ಮುಂಬೈ: ಬಾಲಿವುಡ್ ನ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಬಾಲಿಯಲ್ಲಿ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದು, ಅಲ್ಲಿನ ಬೀಚ್ ವೊಂದರಲ್ಲಿ  ಅವರು ಆರೋಗ್ಯವಾಗಿರಲು ಹಾಗು ಫಿಟ್ ಆಗಿರಲು ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.


ಅವರ ವರ್ಕ್ ಔಟ್ ಮಾಡುತ್ತಿರುವ ವಿಡಿಯೋಗಳನ್ನು ಹಾಗು ಫೋಟೋಗಳನ್ನು ಯಾವಾಗಲೂ ಸಾಮಾಜಿಕ ತಾಣಗಳಲ್ಲಿ ಹಾಕುತ್ತಿದ್ದರು. ಈಗ ಜಾಕ್ವೆಲಿನ್ ಬಾಲಿ ಬೀಚ್ ನಲ್ಲಿ ನಿಯಾನ್ ಸ್ವಿಮ್ ಸೂಟ್ ಧರಿಸಿ ವರ್ಕ್ ಔಟ್ ಮಾಡುತ್ತಿರುವ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ.


ಸದ್ಯ ಅವರು ಬಾಲಿವುಡ್ ನ ರೇಸ್-3 ನಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ರೆಮೋ ಡಿಸೋಜಾ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.  ಜಾಕ್ವೆಲಿನ್ ಫರ್ನಾಂಡಿಸ್ ಅವರು ಈ ಚಿತ್ರಕ್ಕಾಗಿಯೇ ಎಂಎಂಎ ತರಬೇತಿ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ