ಸೈಫ್ ಅಲಿ ಖಾನ್ ಚಿಕಿತ್ಸೆಗೆ ಎರಡು ದಿನಕ್ಕೆ ಆದ ವೆಚ್ಚವೆಷ್ಟು, ಅವರು ಖರ್ಚು ಮಾಡಿದ್ದೆಷ್ಟು

Krishnaveni K

ಶನಿವಾರ, 18 ಜನವರಿ 2025 (10:50 IST)
ಮುಂಬೈ: ಚಾಕು ಇರಿತಕ್ಕೊಳಗಾಗಿರುವ ನಟ ಸೈಫ್ ಅಲಿ ಖಾನ್ ಗೆ ಈಗ ಮುಂಬೈನ ಪ್ರತಿಷ್ಠಿತ ಲೀಲಾವತಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಎರಡು ದಿನಕ್ಕೆ ಅವರ ಚಿಕಿತ್ಸೆಗೆ ತಗುಲಿದ ವೆಚ್ಚವೆಷ್ಟು ಎಂಬುದು ಈಗ ಬಯಲಾಗಿದೆ.

ಸೈಫ್ ಅಲಿ ಖಾನ್ ಗೆ ಮೊನ್ನೆ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಆರು ಬಾರಿ ಇರಿದಿದ್ದ. ಪರಿಣಾಮ ಸೈಫ್ ಬೆನ್ನು, ಕೈ, ಹೆಗಲು ಸೇರಿದಂತೆ ಗಂಭೀರ ಗಾಯಗಳಾಗಿದ್ದವು.

ಸೈಫ್ ದೇಹದಲ್ಲಿ ಚಾಕುವಿನ ತುಂಡು ಬಾಕಿಯಾಗಿತ್ತು. ಇದನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ. ಇದರ ಫೋಟೋಗಳನ್ನು ವೈದ್ಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಸೈಫ್ ಕೊಂಚ ಚೇತರಿಸಿಕೊಂಡಿದ್ದು ಐಸಿಯುವಿನಿಂದ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಆದರೆ ಬೆನ್ನು ಹುರಿಗೆ ಗಾಯವಾಗಿರುವ ಕಾರಣ ನಡೆದಾಡಿದರೆ ಸೋಂಕು ತಗುಲುವ ಸಾಧ್ಯತೆಯಿದೆ. ಹೀಗಾಗಿ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.

ಇನ್ನು ಸೈಫ್ ವೈದ್ಯಕೀಯ ವೆಚ್ಚ, ಆರೋಗ್ಯ ವಿಮೆ ವಿವರಗಳು ಬಹಿರಂಗವಾಗಿದೆ. ಸೈಫ್ ತಮ್ಮ ಆರೋಗ್ಯ ವಿಮೆಯಿಂದ 35.95 ಲಕ್ಷ ರೂ.ಗಳಿಗೆ ಕ್ಲೈಮ್ ಮಾಡಿದ್ದರು. ಈ ಪೈಕಿ ಈಗಾಗಲೇ ವಿಮಾ ಸಂಸ್ಥೆ 25 ಲಕ್ಷ ರೂ. ನೀಡಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಇನ್ನು ಎರಡು ದಿನಗಳಲ್ಲಿ ಸೈಫ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ