ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಕೊನೆಗೂ ಅರೆಸ್ಟ್

Krishnaveni K

ಶುಕ್ರವಾರ, 17 ಜನವರಿ 2025 (11:53 IST)
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಬೈ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ತನಿಖೆ ನಡೆಸಿದ್ದರು. ಅದರಂತೆ ನಿನ್ನೆಯೇ ಓರ್ವ ಶಂಕಿತನ  ಸಿಸಿಟಿವಿ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಶಂಕಿ ರೈಲ್ವೇ ನಿಲ್ದಾಣಕ್ಕೆ ಹೋಗಿದ್ದು ಪತ್ತೆಯಾಗಿತ್ತು.

ಅದರಂತೆ ವಿವಿಧ ಕಡೆಗೆ ತಲಾಷ್ ನಡೆಸಿದ ಪೊಲೀಸರು ಕೊನೆಗೂ ಈಗ ಓರ್ವನನ್ನು ಬಂಧಿಸುವಲ್ಲಿ ಯಶಸ್ವಯಾಗಿದ್ದಾರೆ. ಆತನ ಸಂಪೂರ್ಣ ವಿವರ ಇನ್ನಷ್ಟೇ ಬರಬೇಕಿದೆ. ಈತ ಯಾರು, ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾನೆ ಎಂಬ ವಿವರವನ್ನು ಕಲೆ ಹಾಕಬೇಕಿದೆ.

ಆರೋಪಿಯನ್ನು ಬಂಧಿಸಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇಲ್ಲಿ ವಿಚಾರಣೆ ನಡೆಸಿದ ಬಳಿಕ ಈತನ ನಿಜ ಉದ್ದೇಶ ಏನಾಗಿತ್ತು ಎಂಬುದು ತಿಳಿದುಬರಲಿದೆ. ಅಲ್ಲದೆ, ಈತ ಒಬ್ಬನೇ ಕೃತ್ಯವೆಸಗಿದ್ದಾನೆಯೇ ಅಥವಾ ಆತನಿಗೆ ಸಹಾಯ ಮಾಡಿದವರು ಯಾರು ಎಂಬುದು ತಿಳಿದುಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ