ತುಳುವಿನ 'ಜೈ' ಸಿನಿಮಾದ ಶೂಟಿಂಗ್‌ಗಾಗಿ ಮಂಗಳೂರಿಗೆ ಆಗಮಿಸಿರುವ ನಟ ಸುನೀಲ್ ಶೆಟ್ಟಿ ಅವರು ಸ್ನೇಹಿತ ಸೈಫ್ ಅಲಿ ಖಾನ್ ಅವರು ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೈಫ್ ಅವರು ಈಗ ಔಟ್ ಆಫ್ ಡೇಂಜರ್ ಎಂದರು.
'ಜೈ' ಎಂಬ ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪವರ್‌ಫುಲ್ ಪಾತ್ರ ಮಾಡುತ್ತಿದ್ದಾರೆ. ಶೂಟಿಂಗ್‌ಗಾಗಿ ಮಂಗಳೂರಿಗೆ ಬಂದಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸೈಫ್ ಚಾಕು ಇರಿತದ ಘಟನೆ ಕುರಿತು ಸುನೀಲ್ ಮಾತನಾಡಿ, ಸೆಕ್ಯೂರಿಟಿ ಸಮಸ್ಯೆ ಆಗಿರಬಹುದು ಎಂದು ಹೇಳಿದ್ದಾರೆ. ಸೈಫ್‌ಗೆ ಏನಾಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಈ ವಿಚಾರ ನನಗೆ ಗೊತ್ತಾದ ತಕ್ಷಣ ನನಗೆ ಅನಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಲಿ ಎಂಬುದಷ್ಟೇ ಎಂದಿದ್ದಾರೆ.
ಈ ವಿಚಾರ ನನಗೆ ತುಂಬಾ ತಡವಾಗಿ ಗೊತ್ತಾಯಿತು. ಸೆಕ್ಯೂರಿಟಿ ಸಮಸ್ಯೆ ಆಗಿರುವಂತೆ ಕಾಣುತ್ತಿದೆ. ಸದ್ಯ ಅವರು ಔಟ್ ಆಫ್ ಡೇಂಜರ್ . ಅವರು ಶೀಘರ ಗುಣಮುಖರಾಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.