ಬಾಹುಬಲಿ ಚಿತ್ರದ ನಂತರ ನಟಿ ರಮ್ಯಾ ಕೃಷ್ಣ ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ?

ಶುಕ್ರವಾರ, 6 ಜುಲೈ 2018 (06:55 IST)
ಹೈದರಾಬಾದ್ : ನಟಿ ರಮ್ಯಾ ಕೃಷ್ಣ ಅವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಬಾಹುಬಲಿ ಚಿತ್ರದ ನಂತರ ಅವರು ಬಹಳ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ಹೌದು. ನಟಿ ರಮ್ಯಾಕೃಷ್ಣ ಅವರು  ಬಾಹುಬಲಿ ಚಿತ್ರದಲ್ಲಿ ಬಾಹುಬಲಿಯ ಅಮ್ಮ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆದ ಕಾರಣದಿಂದ ರಮ್ಯಾಕೃಷ್ಣ ಅವರ ಡಿಮ್ಯಾಂಡ್ ಸಾಕಷ್ಟು ಏರಿಕೆಯಾಗಿದೆ. ಜೊತೆಗೆ ಅವರ ಸಂಬಳದಲ್ಲಿ ಕೂಡ  ಏರಿಕೆಯಾಗಿದೆ ಎಂಬುದಾಗಿ ಮೂಲಗಳಿಂದ ತಿಳದುಬಂದಿದೆ.

ಸದ್ಯ ತೆಲುಗು ಚಿತ್ರ ಶೈಲಜಾ ರೆಡ್ಡಿ ಅಲ್ಲುಡು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಮೂಲಗಳ ಪ್ರಕಾರ ರಮ್ಯಾ ಒಂದು ದಿನದ ಶೂಟಿಂಗ್ ಗೆ ಆರು ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ. ರಮ್ಯಾ 25 ದಿನಗಳ ಕಾಲ ಶೂಟಿಂಗ್ ಮಾಡಲಿದ್ದಾರೆ. ಅಂದ್ರೆ ರಮ್ಯಾ ಒಂದು ಚಿತ್ರಕ್ಕೆ 1.50 ಕೋಟಿ ರೂಪಾಯಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ