ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?

ಸೋಮವಾರ, 2 ಜುಲೈ 2018 (12:41 IST)
ಹೈದರಾಬಾದ್ : ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಅವರ ಫೋಟೋ ಹಾಕಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರೈತನೊಬ್ಬ ಗದ್ದೆಯಲ್ಲಿ ಒಳ್ಳೆ ಫಸಲನ್ನು ಬೆಳೆದಿದ್ದ. ಇದೀಗ ಮತ್ತೊಬ್ಬ ರೈತ ಟಾಲಿವುಡ್ ನ ನಟಿಯೊಬ್ಬರ ಕಟೌಟ್ ಗಳನ್ನು ತಮ್ಮ ಹೊಲದಲ್ಲಿ ನಿಲ್ಲಿಸಿ ಸುದ್ದಿಯಾಗಿದ್ದಾರೆ.


ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ 2 ಎಕರೆ ಜಮೀನಿನ ಮಾಲೀಕ ಅನ್ವರ್ ಎಂಬುವವರು ತಮ್ಮ ಹೊಲದಲ್ಲಿ ತರಕಾರಿ ಬೆಳೆದಿದ್ದು, ರಸ್ತೆಯಲ್ಲಿ ಓಡಾಡುವವರ ದೃಷ್ಟಿ ಬಿದ್ದು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರಂತೆ.


ಅದಕ್ಕಾಗಿ ತಮ್ಮ ಹೊಲದ ಮಧ್ಯದಲ್ಲಿ ಕಾಜಲ್ ಅಗರ್​​ವಾಲ್ ಅವರ ದೊಡ್ಡ ದೊಡ್ಡ ಕಟೌಟ್​​​ಗಳನ್ನು ಹಾಕಿದ್ದಾರೆ. ಇದರಿಂದ ರಸ್ತೆಯಲ್ಲಿ ಓಡಾಡುವರ ಕಣ್ಣು ಕಾಜಲ್ ಮೇಲೆ ಬೀಳುತ್ತೆ  ಹೊರತು, ತರಕಾರಿ ಮೇಲೆ ಬೀಳುವುದಿಲ್ಲ ಎಂಬುದು ಅವರ ಅಭಿಪ್ರಾಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ