ನಾನು ಮನಸ್ಸು ಮಾಡಿದರೆ ಒಂದೇ ನಿಮಿಷದಲ್ಲಿ ಮುಖ್ಯಮಂತ್ರಿಯಾಗುವೆ - ನಟಿ ಹೇಮ ಮಾಲಿನಿ
ಶುಕ್ರವಾರ, 27 ಜುಲೈ 2018 (07:07 IST)
ಜೈಪುರ : ನಾನು ಮನಸ್ಸು ಮಾಡಿದರೆ ಒಂದೇ ನಿಮಿಷದಲ್ಲಿ ಮುಖ್ಯಮಂತ್ರಿಯಾಗಬಹುದು ಎಂದು ಸಂಸದೆ, ಬಹುಭಾಷಾ ನಟಿ ಹೇಮ ಮಾಲಿನಿ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ರಾಜಸ್ತಾನದ ಬನ್ ಸ್ವಾರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಗುರುವಾರ ಭಾಗವಹಿಸಿದ್ದ ವೇಳೆ ಜನರನ್ನುದ್ದೇಶಿಸಿ ಮಾತನಾಡುವಾಗ ಅವರು ಈ ರೀತಿಯಾಗಿ ಹೇಳಿದ್ದಾರೆ. ಹಾಗೇ ಯಾಕೆ ಆಗಿಲ್ಲ ಎಂಬುದಕ್ಕೂ ಕಾರಣ ಕೂಡ ತಿಳಿಸಿದ ಅವರು,’ ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ನನ್ನ ಸ್ವಂತ ಅಲೋಚನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ನನ್ನ ಅಲೋಚನೆಗಳನ್ನು ಯಾವುದೇ ಕಾರಣಕ್ಕೂ ಕಟ್ಟಿಹಾಕಿಕೊಳ್ಳಲು ನಾನು ಇಚ್ಚಿಸುವುದಿಲ್ಲ. ನಾನು ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದೇನೆ. ಲಕ್ಷಾಂತರ ಅಭಿಮಾನಿಗಳು ಡ್ರೀಮ್ ಗರ್ಲ್ ಎಂದೇ ಕರೆಯುತ್ತಾರೆ. ಹೀಗಿರುವಾಗ ನಾನು ಮುಖ್ಯಮಂತ್ರಿಯಾಗಿ ನನ್ನ ಸ್ವಾತಂತ್ರ್ಯ ಕಳೆದುಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.
ಹೇಮಾ ಮಾಲಿನಿ ಮೊದಲ ಬಾರಿಗೆ ರಾಜ್ಯಸಭೆಗೆ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇದ್ದ ಅವಧಿಯಲ್ಲಿ ನಾಮ ನಿರ್ದೇಶನಗೊಂಡಿದ್ದರು. ಅದಕ್ಕೂ ಮುನ್ನ ಆಕೆ ಬಿಜೆಪಿ ಪರ ಚುನಾವಣೆ ಪ್ರಚಾರಗಳನ್ನು ಕೈಗೊಂಡಿದ್ದರು. ಆದರೆ 2004ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. 2010ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದರು. 2011ರಲ್ಲಿ ಕಡಿಮೆ ಅವಧಿಗೆ ರಾಜ್ಯಸಬೆಗೆ ಆಯ್ಕೆಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ