ಅಂದು ಹೀಗೆಳೆದಿದ್ದರು! ಇಂದು ಅದೇ ಯಶ್ ಮುಂದೆ ಮಂಡಿಯೂರಿದ ಬಾಲಿವುಡ್ ಮಂದಿ!

ಗುರುವಾರ, 31 ಆಗಸ್ಟ್ 2023 (09:20 IST)
ಮುಂಬೈ: ಕೆಜಿಎಫ್ ಸ್ಟಾರ್ ಯಶ್ ಈಗ ಬಾಲಿವುಡ್ ನಲ್ಲೂ ಬೇಡಿಕೆ ಹೊಂದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಶಾರುಖ್ ಖಾನ್ ಜವಾನ್ ಸಿನಿಮಾಗೆ ಯಶ್ ಸಾಥ್ ನೀಡುತ್ತಿದ್ದಾರೆ.

ಅಂದು ಯಶ್ ಕೆಜಿಎಫ್ 1 ಸಿನಿಮಾ ಮತ್ತು ಶಾರುಖ್ ಖಾನ್ ಜೀರೋ ಸಿನಿಮಾ ಒಂದೇ ದಿನ ತೆರೆ ಕಂಡಿತ್ತು. ಆದರೆ ಈ ಸಿನಿಮಾಗಳು ತೆರೆ ಕಾಣುವ ಮೊದಲು ಶಾರುಖ್ ಜೀರೋ ಮುಂದೆ ಯಶ್ ಕೆಜಿಎಫ್ ಮುಳುಗಿ ಹೋಗುತ್ತಾರೆ ಎಂದು ಬಾಲಿವುಡ್ ಮಂದಿ ಹೀಗೆಳೆದಿದ್ದರು.

ಇದೀಗ ಯಶ್ ಮುಂದೆ ಅದೇ ಬಾಲಿವುಡ್ ಮಂಡಿಯೂರಿ ಕುಳಿತಿದೆ. ಜವಾನ್ ಸಿನಿಮಾದ ಕನ್ನಡ ಅವತರಣಿಕೆಗೆ ಯಶ್ ಹಿನ್ನಲೆ ಧ್ವನಿ ನೀಡಿದ್ದಾರೆ. ಮಲಯಾಳಂನಲ್ಲಿ ನಟ ಪೃಥ್ವಿ ರಾಜ್ ಸುಕುಮಾರನ್ ಧ್ವನಿ ನೀಡಿದ್ದಾರೆ. ಈ ಇಬ್ಬರಿಗೂ ಜವಾನ್ ನಿರ್ಮಾಪಕಿಯೂ ಆಗಿರುವ ಶಾರುಖ್ ಪತ್ನಿ ಗೌರಿ ಖಾನ್ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ