ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕೀರ್ತಿ: ವರುಣ್‌ ಧವನ್‌ ಜೊತೆ ರೊಮ್ಯಾನ್ಸ್‌

Sampriya

ಭಾನುವಾರ, 26 ಮೇ 2024 (16:38 IST)
Photo Courtesy X
ಮುಂಬೈ: ಮಹಾನಟಿ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಟಿ ಕೀರ್ತಿ ಸುರೇಶ್‌. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹವಾ ಸೃಷ್ಟಿಸಿದ ಕೀರ್ತಿ ಸುರೇಶ್ ಇದೀಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕೀರ್ತಿ ಸುರೇಶ್‌ ಅವರು ವರುಣ್‌ ಧವಣ್‌ ನಾಯಕರಾಗಿರುವ ಹಿಂದಿಯ ಬೇಬಿ ಜಾನ್ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಈ ಚಿತ್ರವು ಇದೇ ಮೇ 31ರಂದು ತೆರೆಗೆ ಬರಲಿದೆ.

ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಆರಂಭದಲ್ಲಿ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡು, ನಂತರ ಮಡಿವಂತಿಕೆಯ ಪಾತ್ರಗಳಿಗೆ ಜೀವತುಂಬಿದ್ದ ಕೀರ್ತಿ ಅವರು ಬೇಬಿ ಜಾನ್‌ ಚಿತ್ರದಲ್ಲಿ ತುಸು ಹಾಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಲಿಪ್‌ಲಾಕ್‌ ಸೀನ್​ಗಳಲ್ಲೂ ಕಾಣಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬೇಬಿ ಜಾನ್ ತಮಿಳಿನ ತೇರಿ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರವನ್ನು ಕಾಲಿಸ್ ನಿರ್ದೇಶಿಸುತ್ತಿದ್ದಾರೆ.   


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ