ಕಿಚ್ಚ ಸುದೀಪ್ ನನಗೆ ಇಷ್ಟವಾದ ಹೀರೋ ಎಂದ ಹಾಟ್ ನಟಿ

ಬುಧವಾರ, 29 ನವೆಂಬರ್ 2023 (10:46 IST)
ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈ ಸುಂದರಿಗೆ ಸದ್ಯಕ್ಕೆ ನಟ ಸುದೀಪ್ ಅವರೊಂದಿಗೆ ನಟಿಸಬೇಕೆಂಬುವುದು ಅವರ ತುಡಿತವಂತೆ. ಅಲ್ಲದೇ ಕನ್ನಡ ಸಿನಿಮಾದಲ್ಲಿ ನಟಿಸೋದು ಅಂದ್ರೆ ಅವರಿಗ ತುಂಬಾನೇ ಖುಷಿಯಂತೆ.

ಅದರಲ್ಲೂ ಕಿಚ್ಚ ಸುದೀಪ್ ಅವರ ಚಿತ್ರಗಳನ್ನು ನೋಡಿರುವ ಬಾಲಿವುಡ್ ನಟಿ ಯಾಮಿ ಗೌತಮಿ ಅದರಿಂದ ತುಂಬಾನೇ ಪ್ರಭಾವಿತರಾಗಿದ್ದಾರಂತೆ. 
 
ಪ್ರತಿಯೊಬ್ಬ ನಟ-ನಟಯರಿಗೆ ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆ ಈ ಜೊತ ಅಭಿನಯಿಸಬೇಕು,ಅವರ ಜೊತೆ ಅಭಿನಯಿಸಬೇಕು ಅನ್ನೋ ಆಸೆಗಳಿರುತ್ತವೆ. ಹಾಗೇ ನಟಿ ಯಾಮಿ ಗೌತಮ್ ಅವರಿಗೂ ಒಬ್ಬರ ಜೊತೆ ಅಭಿನಯಿಸೋ ಆಸೆಯಿದೆಯಂತೆ. ಅದು ನಟ ಕಿಚ್ಚ ಸುದೀಪ್ ಜೊತೆ. ಒಮ್ಮೆಯಾದ್ರೂ ಸುದೀಪ್ ಜೊತೆ ಅಭಿನಯಿಸಬೇಕು ಅನ್ನೋದು ಅವರ ಬಹು ದಿನದ ಆಸೆಯಂತೆ.  
 
ಇನ್ನು ಯಾಮಿ ಮಾತು ಕೇಳಿ ಕಿಚ್ಚ ಅಭಿಮಾನಿಗಳಂತೂ ತುಂಬಾನೇ ಖುಷಿಯಾಗಿದ್ದಾರೆ. ಯಾಮಿ ಹಾಗೂ ಸುದೀಪ್ ಅವರನ್ನು ಯಾವಾಗ ತೆರೆ ಮೇಲೆ ಜೊತೆಯಾಗಿ ನೋಡುತ್ತೇವೋ ಅಂತಾ ಲೆಕ್ಕಾಚಾರ ಹಾಕುತ್ತಿದ್ದಾರಂತೆ. ಯಾಮಿ ಬಯಕೆಗೆ ಸುದೀಪ್ ಏನ್ ಹೇಳ್ತಾರೋ ಕಾದು ನೋಡ್ಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ