ಕರಣ್ ಜೋಹರ್ ಪಾರ್ಟಿಯಲ್ಲಿ ಬಾಲಿವುಡ್ ನಟರು ಡ್ರಗ್ಸ್ ನಶೆಯಲ್ಲಿದ್ದಿದ್ದು ನಿಜವಾ?!

ಬುಧವಾರ, 31 ಜುಲೈ 2019 (10:40 IST)
ಮುಂಬೈ: ಇತ್ತೀಚೆಗಷ್ಟೇ ನಿರ್ಮಾಪಕ ಕರಣ್ ಜೋಹರ್ ತಮ್ಮ ಆತ್ಮೀಯ ವಲಯದವರಿಗಾಗಿ ಪಾರ್ಟಿ ಏರ್ಪಡಿಸಿದ್ದರು. ಆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟರು ಡ್ರಗ್ಸ್ ನಶೆಯಲ್ಲಿದ್ದರು ಎಂದು ಶಿರೋಮಣಿ ಅಕಾಲಿದಳ ಶಾಸಕರೊಬ್ಬರು ಆರೋಪಿಸಿದ್ದಾರೆ.


ಈ ಪಾರ್ಟಿಯ ವಿಡಿಯೋ ಒಂದನ್ನು ಕರಣ್ ಜೋಹರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಶಾಸಕ ಮಂಜೀಂದರ್ ಸಿರ್ಸಾ ಎಂಬವರು ಈ ವಿಡಿಯೋ ನೋಡಿದರೆ ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವಿಸಿದಂತೆ ತೋರುತ್ತಿದೆ. ಇದು ನಿಜಕ್ಕೂ ಅಪರಾಧ ಎಂದು ಆರೋಪಿಸಿದ್ದರು.

ಈ ವಿಡಿಯೋದಲ್ಲಿ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಸೇರಿದಂತೆ ಪ್ರಮುಖ ನಟ, ನಟಿಯರು ಇದ್ದರು. ಆದರೆ ಸಿರ್ಸಾ ಆರೋಪಕ್ಕೆ ಕಾಂಗ್ರೆಸ್ ನಾಯಕ ಮಿಲಿಂದ್ ದೇವೋರಾ ತಿರುಗೇಟು ನೀಡಿದ್ದು, ಪಾರ್ಟಿಯಲ್ಲಿ ನನ್ನ ಪತ್ನಿಯೂ ಇದ್ದಳು. ಯಾರೂ ಡ್ರಗ್ ನಶೆಯಲ್ಲಿರಲಿಲ್ಲ. ನಿಮಗೆ ಇಂತಹ ಆರೋಪ ಮಾಡಲು ನಾಚಿಕೆಯಾಗಬೇಕು ಎಂದಿದ್ದಾರೆ. ಅಂತೂ ಕರಣ್ ಜೋಹರ್ ಈ ಪಾರ್ಟಿ ವಿಡಿಯೋ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ