ಡ್ರಗ್ ಕೇಸ್: ನಟಿ ಅನನ್ಯಾ ಪಾಂಡೆ ವಿಚಾರಣೆ ಮಾಡಿದ ಎನ್ ಸಿಬಿ

ಗುರುವಾರ, 21 ಅಕ್ಟೋಬರ್ 2021 (16:44 IST)
ಮುಂಬೈ: ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ವ್ಯಾಟ್ಸಪ್ ನಲ್ಲಿ ಚ್ಯಾಟ್ ಮಾಡಿದ್ದಾರೆಂಬ ಕಾರಣಕ್ಕೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್ ಸಿಬಿ ವಿಚಾರಣೆಗೆ ಕರೆದಿದೆ.
Photo Courtesy: Google


ಆರ್ಯನ್ ಫೋನ್ ನಲ್ಲಿ ವ್ಯಾಟ್ಸಪ್ ಚ್ಯಾಟ್ ಲಿಸ್ಟ್ ಪರಿಶೀಲಿಸಿದ ಎನ್ ಸಿಬಿ ಅಧಿಕಾರಿಗಳಿಗೆ ಅನನ್ಯಾ ಹೆಸರು ಬೆಳಕಿಗೆ ಬಂತು. ಹೀಗಾಗಿ ಅನನ್ಯಾರನ್ನು ಕರೆಸಿ ಎನ್ ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಅನನ್ಯಾಳನ್ನು ವಿಚಾರಣೆಗೆ ಕರೆಸುವ ಸಾಧ‍್ಯತೆಯಿದೆ ಎನ್ನಲಾಗಿದೆ.

ಆರ್ಯನ್ ಜೊತೆ ಚ್ಯಾಟ್ ನಡೆಸಿದ ಇನ್ನಷ್ಟು ನಟ-ನಟಿಯರನ್ನು ಎನ್ ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಸುವ ಸಾಧ‍್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ