ಡ್ರಗ್ ಕೇಸ್: ಮತ್ತೆ ಅನನ್ಯಾ ಪಾಂಡೆ ಡ್ರಿಲ್ ಮಾಡಲಿರುವ ಎನ್ ಸಿಬಿ

ಶುಕ್ರವಾರ, 22 ಅಕ್ಟೋಬರ್ 2021 (10:08 IST)
ಮುಂಬೈ: ಆರ್ಯನ್ ಖಾನ್ ಡ್ರಗ್ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಎನ್ ಸಿಬಿ ಮತ್ತೆ ನಟಿ ಅನನ್ಯಾ ಪಾಂಡೆಯನ್ನು ಕರೆಸಿ ವಿಚಾರಣೆ ನಡೆಸಲಿದೆ.


ನಿನ್ನೆ ಸತತ ಮೂರು ತಾಸುಗಳ ಕಾಲ ಎನ್ ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆ ವಿಚಾರಣೆ ನಡೆಸಿದ್ದರು. ಇಂದು ಮತ್ತೆ 11 ಗಂಟೆಗೆ ವಿಚಾರಣೆ ಕರೆದಿದ್ದಾರೆ.

ಆರ್ಯನ್ ಆಪ್ತ ಗೆಳತಿಯಾಗಿರುವ ಅನನ್ಯಾ ಜೊತೆಗಿನ ವ್ಯಾಟ್ಸಪ್ ಸಂದೇಶ ಆಧರಿಸಿ ವಿಚಾರಣೆ ಮಾಡಲಾಗುತ್ತಿದೆ. ಆರ್ಯನ್ ವ್ಯಾಟ್ಸಪ್ ಚ್ಯಾಟ್ ನಲ್ಲಿ ಅನನ್ಯಾ ಜೊತೆಗಿನ ನಡೆಸಿರುವ ಮಾತುಕತೆ ಎನ್ ಸಿಬಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ