ನೇಹಾ ಧೂಪಿಯಾ ಮದುವೆಗೂ ಮೊದಲು ಗರ್ಭಿಣಿಯಾ? ಈ ಬಗ್ಗೆ ನೇಹಾ ತಂದೆ ಹೇಳಿದ್ದೇನು?

ಬುಧವಾರ, 23 ಮೇ 2018 (06:16 IST)
ಮುಂಬೈ : ಬಾಲಿವುಡ್ ನಟಿ ನೇಹಾ ಧೂಪಿಯಾ ಅವರು ನಟ ಅಂಗದ್ ಸಿಂಗ್ ಬೇಡಿ ಜೊತೆ ಅವಸರ ಅವಸರದಲ್ಲಿ ಮದುವೆಯಾಗಿರುವುದನ್ನು ನೋಡಿ ಕೆಲವರು ಅವರ ಬಗ್ಗೆ ರೂಮರ್ಸ್ ವೊಂದನ್ನು ಹಬ್ಬಿಸುತ್ತಿದ್ದಾರೆ.


ಹೌದು. ನಟಿ ನೇಹಾ ಧೂಪಿಯಾ ಸದ್ದಿಲ್ಲದೇ ತರಾತುರಿಯಲ್ಲಿ ಮದುವೆಯಾಗಲು ಕಾರಣ ಆಕೆ ಗರ್ಭಿಣಿಯಾಗಿದ್ದರು ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ನೇಹಾ ಧೂಪಿಯಾ ತಂದೆ ಪ್ರದೀಪ್ ಧೂಪಿಯಾ ಅವರು,’ ಮದುವೆಗೂ ಮುನ್ನವೇ ಮಗಳು ಗರ್ಭಿಣಿ ಎಂಬ ಸುದ್ದಿ ಶುದ್ಧ ಸುಳ್ಳು. ಆ ತರಹ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರೂ ಮದುವೆ ಆಗಿದ್ರಿಂದ, ಈ ತರಹ ಗಾಳಿಮಾತು ಕೇಳಿಬರುತ್ತಿದೆ ಅಷ್ಟೇ. ಕೆಲವರು ತಮಗೆ ಇಷ್ಟಬಂದಂತೆ ರೂಮರ್ಸ್ ಹಬ್ಬಿಸುತ್ತಿರುತ್ತಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ