ಬೇಡದ ದಾಖಲೆಯೊಂದಿಗೆ ಐಪಿಎಲ್ ಗೆ ಮಂಗಳ ಹಾಡಿದ ರೋಹಿತ್ ಶರ್ಮಾ
ಪ್ಲೇ ಆಫ್ ಪಂದ್ಯಕ್ಕೆ ಅರ್ಹತೆ ಪಡೆಯಲು ವಿಫಲವಾದ ಮುಂಬೈ ಈ ಆವೃತ್ತಿಯಲ್ಲಿ ಕೇವಲ 14 ಪಂದ್ಯಗಳಿಂದ 12 ಅಂಕಗಳನ್ನಷ್ಟೇ ಪಡೆದಿದೆ.
ಇನ್ನು, ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಒಂದು ಐಪಿಎಲ್ ಆವೃತ್ತಿಯಲ್ಲಿ 300 ರನ್ ಗಳ ದಾಟದೇ ಇರುವ ಬೇಡದ ದಾಖಲೆ ಮಾಡಿದರು. ಈ ಆವೃತ್ತಿಯಲ್ಲಿ 286 ರನ್ ಗಳಷ್ಟೇ ರೋಹಿತ್ ಒಟ್ಟುಗೂಡಿಸಿದ್ದಾರೆ. 2013 ರಲ್ಲಿ ರೋಹಿತ್ ಅತ್ಯಧಿಕ 538 ರನ್ ಗಳಿಸಿದ್ದರು. ರೋಹಿತ್ ಕಳಪೆ ಫಾರ್ಮ್ ಜತೆಗೆ ಅವರ ತಂಡವೂ ಕಳಪೆ ಪ್ರದರ್ಶನ ಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.