ಶ್ರೀದೇವಿ ಜೀವನ ಆಧಾರಿತ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಸಜ್ಜು!

ಮಂಗಳವಾರ, 6 ಮಾರ್ಚ್ 2018 (08:49 IST)
ಮುಂಬೈ: ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಅವರ ಜೀವನ ಆಧಾರಿತ ಸಿನಿಮಾ ನಿರ್ಮಾಣಕ್ಕೆ ರಾಮ್‌ ಗೋಪಾಲ್‌ ವರ್ಮಾ ಆಸಕ್ತರಾಗಿದ್ದಾರೆಯಂತೆ. ಆರ್ ಜಿ ವಿ ನಟಿ ಶ್ರೀದೇವಿಯವರ ಬಹು ದೊಡ್ಡ ಅಭಿಮಾನಿಯಾಗಿದ್ದರು.


ಶ್ರೀದೇವಿ ಅವರ ನಿಧನದ ವೇಳೆ ಆರ್ ಜಿವಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಶ್ರೀದೇವಿ ದೇವರಂತೆ ಆರಾಧಿಸುವ ಆರ್ ಜಿವಿ ಇದೀಗ ಆಕೆಯ ಬಯೊಪಿಕ್‌ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.


ಇದರ ಕುರಿತು ಆರ್‌ಜಿವಿ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಅವರ ನಿಕಟವರ್ತಿ ಗೀತ ರಚನೆಕಾರ ಸಿರಶ್ರೀ ಇತ್ತೀಚೆಗೆ ತೆಲುಗೆ ಚಾನೆಲ್‌ವೊಂದರ ಡಿಬೇಟ್‌ನಲ್ಲಿ ಶ್ರೀದೇವಿ ಬಯೊಪಿಕ್‌ ನಿರ್ಮಾಣದ ಸುಳಿವುವನ್ನು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ