ನಟಿ ಶ್ರೀದೇವಿ ತನಗೆ ಸಹೋದರಿ ಸಮಾನ; ಕಮಲ್ ಹಾಸನ್

ಶನಿವಾರ, 3 ಮಾರ್ಚ್ 2018 (07:40 IST)
ಚೆನ್ನೈ: ಶ್ರೀದೇವಿ ಹಾಗೂ ಕಮಲ್ ಹಾಸನ್ ಜೋಡಿ ಕಾಲಿವುಡ್ ನಲ್ಲಿ ಮೋಡಿ ಮಾಡಿತ್ತು. ಇದೇ ಕಾರಣದಿಂದ ಶ್ರೀದೇವಿಗೂ ಕಮಲ್ ಹಾಸನ್ ಗೂ ಸಂಬಂಧವಿದೆ ಎಂಬ ಗಾಸಿಪ್ ಹಬ್ಬುತ್ತಿದೆ. ಆದರೆ ಈ ಗಾಸಿಪ್ ಗಳಿಗೆ ಕಮಲ್ ಹಾಸನ್ ತೆರೆ ಎಳೆದಿದ್ದಾರೆ.
ಶ್ರೀದೇವಿ ತನಗೆ ತಂಗಿ ಸಮಾನ ಎಂದು ತಮಿಳು ನಟ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ಶ್ರೀದೇವಿ ಮತ್ತು ತನ್ನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಕಲ್ಪಿತ ಕಥೆಗಳ ಬಗ್ಗೆ ಅವರು ಸಿಟ್ಟಾಗಿದ್ದಾರೆ.



ಶ್ರೀದೇವಿ ತನಗೆ ಸಹೋದರಿ ಸಮಾನ, ತನ್ನ ತಂಗಿ. ತಾನು ಅವರ ತಾಯಿ ಬಳಿ ಕೈತುತ್ತು ತಿಂದಿದ್ದೇನೆಂದು ನೆನಪಿಸಿಕೊಂಡಿದ್ದಾರೆ ಕಮಲ್ ಹಾಸನ್.


ನಮ್ಮಿಬ್ಬರ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿ ಕಿರಿಕಿರಿ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ