ರಣವೀರ್ ಸಿಂಗ್ ಜೊತೆ ನಟಿಸಲು ರಣಬೀರ್ ಕಪೂರ್ ಇಷ್ಟವಿಲ್ವಾ. ಈ ಪ್ರಶ್ನೆ ಉದ್ಭವಿಸಲು ಕಾರಣವೇನು?

ಶುಕ್ರವಾರ, 17 ಆಗಸ್ಟ್ 2018 (13:46 IST)
ಮುಂಬೈ : ಬಾಲಿವುಡ್ ನಲ್ಲಿ ಇತ್ತೀಚೆಗೆ ಬಹುಬೇಡಿಕೆಯ ನಟರೆಂದರೆ ಅದು ರಣವೀರ್ ಸಿಂಗ್ ಹಾಗೂ ರಣಬೀರ್ ಕಪೂರ್. ಇವರಿಬ್ಬರನ್ನು ಜೊತೆಯಾಗಿ ತೆರೆ ಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬಯಕೆಯಾಗಿದೆ. ಆದರೆ ಈ ಆಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.


ಹೌದು. ಸಂಜು ಚಿತ್ರದ ನಂತರ ರಣ್ ಬೀರ್ ಕಪೂರ್ ಫೇಮಸ್ ಆದರೆ ಪದ್ಮಾವತ್ ಸಿನಿಮಾದ ನಂತರ ರಣವೀರ್ ಸಿಂಗ್ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಆದ್ದರಿಂದ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ತಮ್ಮ ನಿರ್ಮಾಣದ 'ತಖ್ತ್' ಚಿತ್ರದಲ್ಲಿ ರಣ್ ಬೀರ್ ಹಾಗೂ ರಣ್ ವೀರ್ ಇಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಅಂದುಕೊಂಡಂತೆ ನಡೆದಿದರೆ, ಇವರಿಬ್ಬರು ಒಂದೇ ಚಿತ್ರಕ್ಕೆ ಸಹಿ ಹಾಕಬೇಕಿತ್ತು.


ಆದರೆ ರಣ್ ಬೀರ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿರುವುದರಿಂದ, ಡೇಟ್ ಸಮಸ್ಯೆ ಎದುರಾಗಿದ್ದು, ಹೀಗಾಗಿ ಕರಣ್ ಜೋಹರ್ ಅವರ ಚಿತ್ರದಲ್ಲಿ ಸದ್ಯಕ್ಕೆ ರಣ್ ಬೀರ್ ನಟಿಸುತ್ತಿಲ್ಲ. ಇನ್ನೊಂದೆಡೆ ರಣ್ ವೀರ್ ಗುಲ್ಲಿಬಾಯ್, ಸಿಂಬಾ, ಕಬೀರ್ ಖಾನ್ ಅವರ 83 ಯಲ್ಲಿ ನಟಿಸುತ್ತಿದ್ದಾರೆ. ಇದರಿಂದ ಕೊನೆಗಳಿಗೆಯಲ್ಲಿ ಇದು ಬದಲಾಯಿತು ಎಂದು ಮೂಲಗಳು ತಿಳಿಸಿವೆ. ಆದರೆ ರಣವೀರ್ ಸಿಂಗ್ ಹಾಗೂ  ರಣಬೀರ್ ಕಪೂರ್ ಇಬ್ಬರಿಗೆ ಜೊತೆಯಾಗಿ ನಟಿಸಲು ಇಷ್ಟವಿಲ್ವಾ ಎಂಬ ಪ್ರಶ್ನೆ ಇದೀಗ ಹಲವರಲ್ಲಿ ಮೂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ