ಸೈಫ್ ಅಲಿ ಖಾನ್ ಕೇಸ್ ಗೆ ಕನ್ನಡಿಗ ಎನ್ ಕೌಂಟರ್ ದಯಾ ನಾಯಕ್ ಎಂಟ್ರಿ: ಶಂಕಿತನ ಫೋಟೋ ರಿವೀಲ್

Krishnaveni K

ಗುರುವಾರ, 16 ಜನವರಿ 2025 (19:28 IST)
Photo Credit: Instagram
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದ ಪ್ರಕರಣದ ವಿಚಾರಣೆಗೆ ಕನ್ನಡಿಗ, ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿ ಕೊಟ್ಟಿದ್ದಾರೆ. ಸೈಫ್ ಮನೆ ಮುಂದೆ ದಯಾ ನಾಯಕ್ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಯಾ ನಾಯಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಕರ್ನಾಟಕ ಮೂಲದವರಾದ ಇವರು ಮುಂಬೈ ಪೊಲೀಸ್ ನ ದಕ್ಷ ಅಧಿಕಾರಿ. ಎನ್ ಕೌಂಟರ್ ಗೇ ಖ್ಯಾತಿ ಪಡೆದವರು. ಇವರ ಜೀವನ ಕತೆ ಅನೇಕರಿಗೆ ಸ್ಪೂರ್ತಿಯಾಗಿದೆ.

ಇದೀಗ ಸೈಫ್ ಪ್ರಕರಣದ ವಿಚಾರಣೆ ನಡೆಸಲು ದಯಾ ನಾಯಕ್ ಕೂಡಾ ಅವರ ನಿವಾಸಕ್ಕೆ ಬಂದಿದ್ದಾರೆ. ದಯಾ ನಾಯಕ್ ಮನೆ ಹೊರಗೆ ಇತರೆ ಸಿಬ್ಬಂದಿಗಳ ಜೊತೆ ನಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು, ಸೈಫ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಓರ್ವ ಶಂಕಿತನ ಫೋಟೋ ರಿವೀಲ್ ಮಾಡಿದ್ದಾರೆ. ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಲ್ಲಿ ಒಬ್ಬಾತನಿಗೆ ಮನೆಕೆಲಸದಾಕೆಯೊಂದಿಗೆ ಪರಿಚಯವಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ