ಎಲ್ಲಾ ಚಿತ್ರದ ಫಸ್ಟ್ ಲುಕ್ ನಲ್ಲಿಯೂ ಸಲ್ಮಾನ್ ಖಾನ್ ಈ ಟ್ರಿಕ್ ನ್ನೇ ಫಾಲೋ ಮಾಡ್ತಾರಂತೆ

ಭಾನುವಾರ, 5 ಆಗಸ್ಟ್ 2018 (07:00 IST)
ಮುಂಬೈ : ನಟ ಸಲ್ಮಾನ್ ಖಾನ್ ಅವರು ರೇಸ್-3 ನಂತರ ಇದೀಗ ಭಾರತ್ ಚಿತ್ರದಲ್ಲಿ ನಟಿಸುತ್ತಿದ್ದು, ಭಾರತ್ ಚಿತ್ರದ ಫಸ್ಟ್ ಲುಕ್ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಸಲ್ಮಾನ್ ಖಾನ್ ಎಲ್ಲಾ ಚಿತ್ರದ ಫಸ್ಟ್ ಲುಕ್ ನಲ್ಲಿರುವ ಟ್ರಿಕ್ ವೊಂದನ್ನು ಈ ಚಿತ್ರದ  ಫಸ್ಟ್ ಲುಕ್ ನಲ್ಲಿಯೂ  ತೋರಿಸಿದ್ದಾರಂತೆ.


ಹೌದು ನಟ ಸಲ್ಮಾನ್ ಖಾನ್ ಅವರ ಭಾರತ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಆಗ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಅವರು  ಈವರೆಗಿನ ತಮ್ಮ ಎಲ್ಲ ಚಿತ್ರದ ಫಸ್ಟ್ ಲುಕ್ ನಲ್ಲಿಯೂ ಹಿಂಭಾಗ ತೋರಿಸುತ್ತಾರೆ. ಅದೇರೀತಿ ಈ ಚಿತ್ರದ ಫಸ್ಟ್ ಲುಕ್ ನಲ್ಲಿ ಯೂ ಕೂಡ ಹಿಂಭಾಗವನ್ನು ತೋರಿಸಿದ್ದಾರಂತೆ.


ಇದಕ್ಕೆ ಕಾರಣವೇನು ಎಂಬುದನ್ನು ನಿರ್ದೇಶಕ ಅಲಿ ಅಬ್ಬಾಸ್ ಅವರನ್ನು ಕೇಳಿದರೆ ಅದಕ್ಕೆ ಅವರು ‘ಹಿಂಭಾಗ ತೋರಿಸುವುದು ಈಗಿನ ಟ್ರೆಂಡ್. ಈ ಟ್ರಿಕ್ ಸಕ್ಸಸ್ ನೀಡಿದೆ. ಇದೇ ಕಾರಣಕ್ಕೆ ಸಲ್ಮಾನ್ ಕೂಡ ಈ ಟ್ರಿಕ್ ಪಾಲನೆ ಮಾಡ್ತಿದ್ದಾರೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ