ಸಲ್ಮಾನ್ ಖಾನ್ ಗಾಗಿ ಪೈಲ್ವಾನ್ ಸ್ಪೆಷಲ್ ಪ್ರದರ್ಶನ

ಗುರುವಾರ, 12 ಸೆಪ್ಟಂಬರ್ 2019 (10:21 IST)
ಮುಂಬೈ: ದಬಾಂಗ್ 3 ಸಿನಿಮಾ ನಂತರ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ. ಈಗ ಬಾಲಿವುಡ್ ಸೂಪರ್ ಸ್ಟಾರ್ ಸ್ಯಾಂಡಲ್ ವುಡ್ ಬಾದ್ ಶಹಾ ಕಿಚ್ಚ ಸುದೀಪ್ ರ ಪೈಲ್ವಾನ್ ಸಿನಿಮಾ ವೀಕ್ಷಿಸಲು ಆಸಕ್ತಿ ತೋರಿದ್ದಾರಂತೆ.


ಎಲ್ಲಾ ಸರಿ ಹೋಗಿದ್ದರೆ ಮಂಗಳವಾರವೇ ಸಲ್ಮಾನ್ ಪೈಲ್ವಾನ್ ವೀಕ್ಷಿಸಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಚಿತ್ರತಂಡಕ್ಕೆ ಸಿನಿಮಾ ತೋರಿಸಲು ಸಾಧ್ಯವಾಗಲಿಲ್ಲ.

ಸ್ವತಃ ಸಲ್ಮಾನ್ ಖಾನ್ ಪೈಲ್ವಾನ್ ನೋಡುವ ಆಸೆ ವ್ಯಕ್ತಪಡಿಸಿದ್ದರಿಂದ ಈಗ ಚಿತ್ರತಂಡ  ಅವರ ಮನೆಯಲ್ಲೇ ಈ ವಾರಂತ್ಯಕ್ಕೆ ವಿಶೇಷವಾಗಿ ಪೈಲ್ವಾನ್ ಸಿನಿಮಾ ತೋರಿಸಲಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ