ಹಸೆಮಣೆ ಏರಲು ರೆಡಿಯಾದ ಸ್ಯಾಂಡಲ್ ವುಡ್ ನ ಚಿರು- ಮೇಘನಾ ಜೋಡಿ
ಮಂಗಳವಾರ, 10 ಏಪ್ರಿಲ್ 2018 (07:02 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ಅವರ ಮದುವೆ ದಿನಾಂಕ ನಿಗದಿಯಾಗಿದ್ದು, ಈ ಜೋಡಿ ಮುಂದಿನ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 22ರಂದು ಅದ್ದೂರಿಯಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಮುಂದಿನ ತಿಂಗಳು ಮೇ 2 ರಂದು ಹಸೆಮಣೆ ಏರಲಿದ್ದಾರೆ. ಈಗಾಗಲೇ ಲಗ್ನ ಪತ್ರಿಕೆ ಕೂಡ ಹಂಚಲು ಶುರುಮಾಡಿದ್ದು, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಇವರ ವಿವಾಹ ಸಮಾರಂಭ ನಡೆಯಲಿದೆ. ಅದೇ ದಿನ ಸಂಜೆ ಆರತಕ್ಷತೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ